ಪ್ರಧಾನಿ ನರೇಂದ್ರ ಮೋದಿ ಅವರ ಯೂಟ್ಯೂಬ್ ಚಾನೆಲ್ ಒಂದು ಕೋಟಿ ಚಂದಾದಾರರನ್ನು ದಾಟಿದೆ. ಇದು ಜಾಗತಿಕ ನಾಯಕರನ್ನು ಮೀರಿಸಿದ್ದು, ಹಲವರ ಹುಬ್ಬೇರಿಸಿದೆ.
ಮೋದಿ ಅವರ ಯೂಟ್ಯೂಬ್ ಚಾನೆಲ್ ಅನ್ನು ಅಕ್ಟೋಬರ್ 2007 ರಲ್ಲಿ, ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ರಚಿಸಲಾಯಿತು. ಇದುವರೆಗೆ 164.31 ಕೋಟಿ ವೀಕ್ಷಣೆಗಳನ್ನು ಗಳಿಸಿದೆ. ಪಿಎಂ ಟ್ವಿಟ್ಟರ್, ಇನ್ಸ್ಟಾಗ್ರಾಂ, ಯೂಟ್ಯೂಬ್, ಲಿಂಕ್ಡ್ ಇನ್, ಪಿನ್ಟ್ರೆಸ್ಟ್, ಫ್ಲಿಕರ್ ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಧಾನಿ ಅವರ ಫಾಲೋವರ್ಸ್ ಸಂಖ್ಯೆ ಹೆಚ್ಚುತ್ತಿದೆ.
ಇನ್ನು ಯೂಟ್ಯೂಬ್‌ನಲ್ಲಿ ಇಲ್ಲಿಯವರೆಗಿನ ಪಿಎಂ ಮೋದಿಯವರ ಅತ್ಯಂತ ಜನಪ್ರಿಯ ವಿಡಿಯೋ ಎಂದರೆ ದಿವ್ಯಾಂಗರು ಕಾಶಿಯಲ್ಲಿ ಪಿಎಂ ಅನ್ನು ಸ್ವಾಗತಿಸಿರುವುದಾಗಿದೆ. ಇದನ್ನು ಫೆಬ್ರವರಿ 2019 ರಲ್ಲಿ ಅಪ್‌ಲೋಡ್ ಮಾಡಲಾಗಿದೆ ಮತ್ತು 70,128,707 ವೀಕ್ಷಣೆಗಳನ್ನು ಹೊಂದಿದೆ. ಅಕ್ಷಯ್ ಕುಮಾರ್ ಅವರೊಂದಿಗಿನ ಸಂಭಾಷಣೆಯು ಮತ್ತೊಂದು ಜನಪ್ರಿಯ ವಿಡಿಯೋವಾಗಿದ್ದು, ಏಪ್ರಿಲ್ 2019 ರಲ್ಲಿ ಅಪ್‌ಲೋಡ್ ಮಾಡಲಾಗಿದೆ. ಇದು 51,521,185 ವೀಕ್ಷಣೆಗಳನ್ನು ಹೊಂದಿದೆ. 2019 ರಲ್ಲಿ ಆಗಿನ ಇಸ್ರೋ ಮುಖ್ಯಸ್ಥ ಕೆ.ಶಿವನ್ ಅವರನ್ನು ಸಮಾಧಾನಪಡಿಸಿದ ಮತ್ತೊಂದು ವಿಡಿಯೋ 54,242,295 ವೀಕ್ಷಣೆಗಳನ್ನು ಗಳಿಸಿದೆ.
ಆಸ್ಕರ್ ಪ್ರಶಸ್ತಿ ವಿಜೇತ ನಟನ ಫೋಟೋವನ್ನು ಜಾಹೀರಾತಿನಲ್ಲಿ ಬಳಸಿ ಟೀಕೆಗೆ ಗುರಿಯಾದ ಆಸ್ಪತ್ರೆ..!
ಪಿಎಂ ಮೋದಿ ಟ್ವಿಟ್ಟರ್‌ನಲ್ಲಿ 7.5 ಕೋಟಿಗೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ ಮತ್ತು ಫೇಸ್‌ಬುಕ್‌ನಲ್ಲಿ 4 ಕೋಟಿಗೂ ಹೆಚ್ಚು ಲೈಕ್‌ಗಳನ್ನು ಪಡೆದಿದ್ದಾರೆ.
ಅಂದಹಾಗೆ, ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರು ಜಾಗತಿಕ ನಾಯಕರ ಪಟ್ಟಿಯಲ್ಲಿ ಪಿಎಂ ಮೋದಿ ನಂತರ ಎರಡನೇ ಸ್ಥಾನದಲ್ಲಿದ್ದಾರೆ. ಇವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಒಟ್ಟು 36 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ. 30.7 ಲಕ್ಷ ಚಂದಾದಾರರನ್ನು ಹೊಂದಿರುವ ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಕೂಡ ಬ್ರೆಜಿಲ್ ಅಧ್ಯಕ್ಷರ ಸರದಿಯಲ್ಲೇ ಇದ್ದಾರೆ.
ಜಾಗತಿಕ ನಾಯಕರ ಚಂದಾದಾರಿಕೆ ಸಂಖ್ಯೆಯ ಪಟ್ಟಿಯಲ್ಲಿ ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡೋಡೊ 28.8 ಲಕ್ಷ ಚಂದಾದಾರರನ್ನು ಒಳಗೊಂಡಿದ್ದಾರೆ. ಇನ್ನು ಶ್ವೇತಭವನವು 19 ಲಕ್ಷ ಚಂದಾದಾರರನ್ನು ಹೊಂದಿದ್ದು, ನಂತರದ ಸ್ಥಾನದಲ್ಲಿ ಯುಎಸ್ ಅಧ್ಯಕ್ಷ ಜೋ ಬಿಡನ್ 7.03 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ.
ಹಿಜಾಬ್ ಧರಿಸಿಯೇ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು….!
ರಾಷ್ಟ್ರೀಯ ನಾಯಕರಿಗೆ ಹೋಲಿಸಿದರೆ ಪಿಎಂ ಮೋದಿ ಹೆಚ್ಚಿನ ಯೂಟ್ಯೂಬ್ ಚಂದಾದಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 5.25 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ. ಕಾಂಗ್ರೆಸ್ ನಾಯಕ ಶಶಿ ತರೂರ್ 4.39 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ. ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ 3.73 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ. ಇತ್ತ ತಮಿಳುನಾಡು ಮುಖ್ಯಮಂತ್ರಿ ಮತ್ತು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮುಖ್ಯಸ್ಥ ಸ್ಟಾಲಿನ್ 2.12 ಲಕ್ಷ ಚಂದಾದಾರರನ್ನು ಹೊಂದಿದ್ದರೆ, ದೆಹಲಿ ಉಪ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಯೂಟ್ಯೂಬ್‌ನಲ್ಲಿ 1.37 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ.