ಬೆಂಗಳೂರು: ಹಲ್ಲೆಗೆರೆ ಶಂಕರ್ ಮನೆಯಲ್ಲಿ ಐವರು ಕುಟುಂಬ ಸದಸ್ಯರ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ.
ಕುಟುಂಬದ ಐವರು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ತಿಗಳರಪಾಳ್ಯದಲ್ಲಿರುವ ಶಂಕರ್ ನಿವಾಸದಲ್ಲಿ ಪೊಲೀಸರು ಪಂಚನಾಮೆ ನಡೆಸಿದ್ದು, ಈ ವೇಳೆ ಮೂರು ಡೆತ್ ನೋಟ್ ಗಳು ಪತ್ತೆಯಾಗಿವೆ. ಇದೇ ವೇಳೆ ಮನೆಯಲ್ಲಿ 1 ಕೆಜಿ ಚಿನ್ನಾಭರಣ ಹಾಗೂ 10-13 ಲಕ್ಷ ರೂಪಾಯಿ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಅಷ್ಟೇ ಅಲ್ಲ ಮನೆಯಲ್ಲಿ ಮಡಿಚಿದ ರೀತಿಯಲ್ಲಿ ಬಿದ್ದಿರುವ ನೋಟುಗಳು ಪೊಲೀಸರಿಗೆ ಸಿಕ್ಕಿವೆ.
BIG NEWS: ಬಿಜೆಪಿಯಲ್ಲಿ ಶಮನವಾಗದ ಅಸಮಾಧಾನ; ಕಾರ್ಯಕಾರಿಣಿಯಿಂದ ಅಂತರ ಕಾಯ್ದುಕೊಂಡ ನಾಯಕರು; ಜಾರಕಿಹೊಳಿ ಬ್ರದರ್ಸ್ ಕೂಡ ಗೈರು
ಶಂಕರ್ ಪುತ್ರ ಮಧುಸಾಗರ್ ಹಾಗೂ ಪುತ್ರಿಯರಾದ ಸಿಂಚನಾ, ಸಿಂಧೂರಾಣಿ ಪ್ರತ್ಯೇಕವಾಗಿ ಬರೆದಿಟ್ಟಿರುವ ಮೂರು ಡೆತ್ ನೋಟ್ ಗಳು ಸಿಕ್ಕಿದ್ದು, ಮಗ ಮಧುಸಾಗರ್ ತನ್ನ ತಂದೆಯ ವಿರುದ್ಧ ಅನೈತಿಕ ಸಂಬಂಧ, ಮಹಿಳೆಯರು, ಮಕ್ಕಳಿಗೆ ಕಿರುಕುಳದ ಆರೋಪ ಮಾಡಿದ್ದಾನೆ. ಒಟ್ಟಾರೆ ಪ್ರಕರಣದ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗಿದ್ದು, ಸ್ಥಳೀಯ ಪತ್ರಿಕಾ ಸಂಪಾದಕರಾಗಿರುವ ಶಂಕರ್ ಸುತ್ತವೇ ಸಂಶಯಗಳು ಮೂಡುತ್ತಿದ್ದು, ಶಂಕರ್ ಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.