alex Certify BIG NEWS: ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣವರ್ ಸಹೋದರನ ವಿರುದ್ಧ FIR ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣವರ್ ಸಹೋದರನ ವಿರುದ್ಧ FIR ದಾಖಲು

ಬೆಂಗಳೂರು: ಪತ್ನಿಗೆ ಕಿರುಕುಳ ನೀಡಿದ ಆರೋಪದಡಿ ಐಪಿಎಸ್ ಅಧಿಕಾರಿ ರವಿ.ಡಿ.ಚೆನ್ನಣ್ಣವರ್ ಸಹೋದರ ರಾಘವೇಂದ್ರ ಚನ್ನಣ್ಣವರ್ ವಿರುದ್ಧ ಬೆಂಗಳೂರಿನ ಚಂದ್ರಾಲೇಔಟ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

2015ರಲ್ಲಿ ರಾಘವೇಂದ್ರ ಚನ್ನಣ್ಣವರ್ ರೋಜಾ ಎಂಬುವವರನ್ನು ವಿವಾಹವಾಗಿದ್ದು, ರವಿ ಡಿ.ಚನ್ನಣ್ಣವರ್ ಮುಂದೆ ನಿಂತು ಮದುವೆ ಮಾಡಿಸಿದ್ದರು. ಆದರೆ ರೋಜಾ ಅವರನ್ನು ಮದುವೆಯಾದ ಒಂದೇ ವರ್ಷಕ್ಕೆ ಬಿಟ್ಟು ಬೇರೊಂದು ಮಹಿಳೆಯೊಂದಿಗೆ ವಿವಾಹವಾಗಿ ಸಂಸಾರ ನಡೆಸಿದ್ದ. ಈ ಬಗ್ಗೆ ಪ್ರಶ್ನಿಸಿದಾಗ ತಿದ್ದಿಕೊಳ್ಳಲು ಸಮಾಯವಕಾಶ ಕೊಡು ಎಂದು ಮನೆಯವರೆಲ್ಲ ರೋಜಾ ಅವರನ್ನು ನಂಬಿಸಿ ಉನ್ನತ ಶಿಕ್ಷಣದ ಕಡೆ ಗಮನಹರಿಸುವಂತೆ ಹೇಳಿದ್ದರು. ಇದೀಗ ನ್ಯಾಯಕ್ಕಾಗಿ ರೋಜಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ.

BIG BREAKING: ಭಾರೀ ಮಳೆ ಹಿನ್ನಲೆ, ಶಾಲೆಗಳಿಗೆ ರಜೆ ಘೋಷಣೆ

ಪತ್ನಿಗೆ ವರದಕ್ಷಿಣೆ ಕಿರುಕುಳ ಆರೋಪದಲ್ಲಿ ರಾಘವೇಂದ್ರ ಚನ್ನಣ್ಣವರ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಪ್ರಕರಣ ದಾಖಲಾಗುತಿದ್ದಂತೆ ಇಬ್ಬರು ಪತ್ನಿಯ ಜತೆಯೂ ಸಂಸಾರ ಮಾಡುವುದಾಗಿ ರಾಘವೇಂದ್ರ ಚನ್ನಣ್ಣವರ್ ಹೇಳಿಕೆ ನೀಡುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...