ಬೆಂಗಳೂರು: ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಸಹೋದರ ಎಂದು ಹೇಳಿಕೊಂಡು ಆಶ್ರಯ ಯೋಜನೆಯಡಿ ಮನೆ ಕೊಡಿಸುತ್ತೇನೆಂದು ಸಾರ್ವಜನಿಕರಿಗೆ ಅರ್ಚಕರೊಬ್ಬರು ವಂಚಸಿ ಲಕ್ಷಾಂತರ ರೂಪಾಯಿ ದೋಚಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಉತ್ತರಹಳ್ಳಿಯ ಆಂಜನೇಯ ದೇಗುಲದ ಪೂಜಾರಿ ಮಂಜುನಾಥ್ ದೇವಾಲಯಕ್ಕೆ ಬರುತ್ತಿದ್ದ ಭಕ್ತರಿಗೆ ಮನೆ ಕೊಡಿಸುವುದಾಗಿ ಹೇಳಿ ವಂಚಿಸಿದ್ದು, ಸುಮಾರು 50 ಜನರಿಂದ ತಲಾ 1.5 ಲಕ್ಷ ರೂಪಾಯಿ ಪಡೆದುಕೊಂಡಿದ್ದಾನೆ ಎನ್ನಲಾಗಿದೆ.
ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವ ಮೊದಲು ಇದನ್ನು ತಿಳಿಯಿರಿ: ಅಕ್ಟೋಬರ್ ನಿಂದ ಬದಲಾಗ್ತಿದೆ ನಿಯಮ
ಸಭೆ, ಸಮಾರಂಭಗಳಲ್ಲಿ ಪ್ರಭಾವಿ ರಾಜಕಾರಣಿಗಳು, ಐಪಿಎಸ್ ಅಧಿಕಾರಿಗಳು, ಸೆಲೆಬ್ರಿಟಿಗಳ ಜೊತೆ ಫೋಟೋ ತೆಗೆದುಕೊಂಡು ಬಳಿಕ ಅವರೆಲ್ಲರೂ ತನಗೆ ಪರಿಚಿತರು. ತಾನು ಐಪಿಎಸ್ ಅಧಿಕಾರಿ ರವಿ. ಡಿ.ಚೆನ್ನಣ್ಣನವರ್ ಸ್ವಂತ ಸಹೋದರ ಎಂದು ಹೇಳಿ ರವಿ ಡಿ.ಚೆನ್ನಣ್ಣನವರ್ ಜೊತೆಗಿನ ಫೋಟೋಗಳನ್ನು ತೋರಿಸಿ ಜನರಿಗೆ ಮೋಸ ಮಾಡುತ್ತಿದ್ದ. ಅರ್ಚಕ ಮಂಜುನಾಥ್ ನಿಂದ ವಂಚನೆಗೊಳಗಾದವರು ಸುಬ್ರಹ್ಮಣ್ಯಪುರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಎಫ್ಐಆರ್ ದಾಖಲಾಗುತ್ತಿದ್ದಂತೆಯೇ ಅರ್ಚಕ ಎಸ್ಕೇಪ್ ಆಗಿದ್ದಾನೆ.