alex Certify BIG NEWS: ಐಟಿಆರ್ ಸಲ್ಲಿಸಲು ಇಂದೇ ಕೊನೆ‌‌ ದಿನ, ದಿನಾಂಕ‌ ವಿಸ್ತರಣೆಯಿಲ್ಲ – ನಿರ್ಮಲಾ ಸೀತಾರಾಮನ್ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಐಟಿಆರ್ ಸಲ್ಲಿಸಲು ಇಂದೇ ಕೊನೆ‌‌ ದಿನ, ದಿನಾಂಕ‌ ವಿಸ್ತರಣೆಯಿಲ್ಲ – ನಿರ್ಮಲಾ ಸೀತಾರಾಮನ್ ಹೇಳಿಕೆ

ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಹೇಳಿದ್ದಾರೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಡಿಸೆಂಬರ್ 31, 2021 ಅಧಿಕೃತ ಗಡುವು ಎಂದು ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಸುದ್ದಿಘೋಷ್ಠಿಯಲ್ಲಿ ತಿಳಿಸಿದ್ದಾರೆ.

ಇದುವರೆಗೆ ಸಲ್ಲಿಕೆಯಾಗಿರುವ ರಿಟರ್ನ್ಸ್‌ಗಳು ಹಿಂದಿನ ವರ್ಷಕ್ಕೆ ಹೋಲಿಸಿದರೆ ಹೆಚ್ಚು ಎಂದು ಕಂದಾಯ ಇಲಾಖೆ ಕಾರ್ಯದರ್ಶಿ ಹೇಳಿದ್ದಾರೆ. ಇಂದಿನವರೆಗೆ 5.62 ಕೋಟಿ ಐಟಿಆರ್‌ಗಳನ್ನು ಸಲ್ಲಿಸಲಾಗಿದೆ. ಇಂದು ಅಂದರೆ ವರ್ಷದ ಕೊನೆಯ ದಿನ 20 ಲಕ್ಷ ರಿಟರ್ನ್ಸ್ ಸಲ್ಲಿಕೆಯಾಗಿದೆ. ಕಳೆದ ಒಂದು ಗಂಟೆಯಲ್ಲಿ ಒಟ್ಟು ಮೂರು ಲಕ್ಷ ಐಟಿಆರ್‌ಗಳು ಸಲ್ಲಿಕೆಯಾಗಿವೆ ಎಂದು ತಿಳಿಸಿದ್ದಾರೆ.

ಆದಾಯ ತೆರಿಗೆ ಇಲಾಖೆಯು ಮೌಲ್ಯಮಾಪಕರಿಗೆ ಒಂದು ಸಡಿಲಿಕೆಯನ್ನು ನೀಡುತ್ತಿದೆ. 2019-20ರ ಆರ್ಥಿಕ ವರ್ಷಕ್ಕೆ ತಮ್ಮ ಐಟಿಆರ್‌ಗಳನ್ನು ಇ-ಪರಿಶೀಲಿಸದ ತೆರಿಗೆದಾರರು ಫೆಬ್ರವರಿ 28, 2022 ರೊಳಗೆ ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು ಎಂದು ತರುಣ್ ಬಜಾಜ್ ಮಾಹಿತಿ ನೀಡಿದ್ದಾರೆ.

ಕಾನೂನಿನ ಪ್ರಕಾರ ಡಿಜಿಟಲ್ ಸಹಿ ಇಲ್ಲದೆ ವಿದ್ಯುನ್ಮಾನವಾಗಿ ಸಲ್ಲಿಸಿದ ಐಟಿಆರ್ ಅನ್ನು, 120 ದಿನಗಳ ಒಳಗೆ ಆಧಾರ್ ಒಟಿಪಿ, ಅಥವಾ ನೆಟ್ ಬ್ಯಾಂಕಿಂಗ್ ಅಥವಾ ಡಿಮ್ಯಾಟ್ ಖಾತೆ, ಪೂರ್ವ-ಮೌಲ್ಯಮಾಪಕ ಬ್ಯಾಂಕ್ ಖಾತೆ ಮತ್ತು ಎಟಿಎಂ ಕೋಡ್ ಮೂಲಕ ವಿದ್ಯುನ್ಮಾನವಾಗಿ ಪರಿಶೀಲಸಬೇಕು. ಪರ್ಯಾಯವಾಗಿ, ತೆರಿಗೆದಾರರು ಸಲ್ಲಿಸಿದ ITR ನ ಭೌತಿಕ ಪ್ರತಿಯನ್ನು ಬೆಂಗಳೂರಿನ ಕೇಂದ್ರೀಕೃತ ಸಂಸ್ಕರಣಾ ಕೇಂದ್ರ (CPC) ಕಚೇರಿಗೆ ಕಳುಹಿಸಬಹುದು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...