alex Certify BIG NEWS: ಐಟಿಆರ್‌ ಸಲ್ಲಿಕೆ ಮೇಲೆ ವಿಶೇಷ ಆಫರ್‌ ಘೋಷಿಸಿದ SBI | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಐಟಿಆರ್‌ ಸಲ್ಲಿಕೆ ಮೇಲೆ ವಿಶೇಷ ಆಫರ್‌ ಘೋಷಿಸಿದ SBI

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಬಯಸುವ ಗ್ರಾಹಕರಿಗೆ ಆಕರ್ಷಕ ಆಫರ್‌ ಗಳನ್ನು ನೀಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮುಂದಾಗಿದೆ. ಎಸ್‌.ಬಿ.ಐ.ನ ಯೋನೋ ಅಪ್ಲಿಕೇಶನ್ ಮೂಲಕ ತೆರಿಗೆ ಪಾವತಿದಾರರು ಐಟಿಆರ್‌ ಅನ್ನು ಉಚಿತವಾಗಿ ಸಲ್ಲಿಸಬಹುದಾಗಿದೆ.

ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನರಿಗೆ ಬಿಗ್ ಶಾಕ್: 3 ತಿಂಗಳಲ್ಲಿ 90 ರೂ. ಏರಿಕೆಯಾದ LPG ಸಿಲಿಂಡರ್ ದರ; ಪೆಟ್ರೋಲ್, ಡೀಸೆಲ್, ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೆ

ಯೋನೋ ಅಪ್ಲಿಕೇಶನ್‌ನಲ್ಲಿ Tax2win ವಿಭಾಗಕ್ಕೆ ಭೇಟಿ ನೀಡಿ, ಐಟಿಆರ್‌ ಅನ್ನು ಉಚಿತವಾಗಿ ಸಲ್ಲಿಸಬಹುದಾಗಿದೆ. ಇದಕ್ಕಾಗಿ ಮಹತ್ವದ ಐದು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

ಆ ದಾಖಲೆಗಳು ಇಂತಿವೆ:

1. ಪಾನ್ ಕಾರ್ಡ್

2. ಆಧಾರ್‌ ಕಾರ್ಡ್

3. ಫಾರಂ-16

4. ತೆರಿಗೆ ಕಡಿತದ ವಿವರಗಳು

ಕೆಲಸದ ನಿರೀಕ್ಷೆಯಲ್ಲಿದ್ದ ಪದವೀಧರ ಕನ್ನಡಿಗರಿಗೆ ಗುಡ್ ನ್ಯೂಸ್: 5830 ಬ್ಯಾಂಕ್ ಹುದ್ದೆಗಳ ನೇಮಕಾತಿಗೆ ಕನ್ನಡದಲ್ಲೇ ಪರೀಕ್ಷೆ, ಇಂದಿನಿಂದಲೇ ಅರ್ಜಿ ಸಲ್ಲಿಕೆ

5. ಬಡ್ಡಿಯಿಂದ ಬರುವ ಆದಾಯದ ಪ್ರಮಾಣಪತ್ರಗಳು ಹಾಗೂ ತೆರಿಗೆ ಉಳಿತಾಯ ಮಾಡಲು ಬೇಕಾದ ಹೂಡಿಕೆಗಳ ಸಾಕ್ಷಿಗಳು

2020-21ರ ವಿತ್ತೀಯ ವರ್ಷದ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇದ್ದ ಕೊನೆಯ ದಿನಾಂಕವನ್ನು ಡಿಸೆಂಬರ್‌ 31ಕ್ಕೆ ವಿಸ್ತರಿಸಲಾಗಿದೆ. ಐಟಿ ರಿಟರ್ನ್ ಸಲ್ಲಿಕೆ ವರ್ಷದಿಂದ ವರ್ಷಕ್ಕೆ ಸಡಿಲಿಕೆ ಆಗುತ್ತಿದ್ದು, ತೆರಿಗೆದಾರರ ಅಲೆದಾಟ ಕಡಿಮೆಯಾಗುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...