ಹಾಸನ: ಏಪ್ರಿಲ್ 23ರವರೆಗೆ ನಿಮ್ಮ ಋಣವಿದೆ ಅಲ್ಲಿಯವರೆಗೂ ಜೆಡಿಎಸ್ ಗೆ ರಾಜೀನಾಮೆ ನೀಡುವುದಿಲ್ಲ ಎಂದು ಹೇಳುವ ಮೂಲಕ ಜೆಡಿಎಸ್ ಶಾಸಕ ಶಿವಲಿಂಗೇಗೌಡ ತಿರುಗೇಟು ನೀಡಿದ್ದಾರೆ.
ರಾಜಕೀಯದಲ್ಲಿ ಸ್ವಂತ ಅಣ್ಣ-ತಮ್ಮಂದಿರೇ ಯುದ್ಧಕ್ಕೆ ನಿಲ್ಲುತಾರೆ. ಸ್ವಂತ ಅಣ್ಣತಮ್ಮಂದಿರೇ ಬೇರೆ ಆಗಿ ಹೋಗ್ತಾರೆ. ನಮಗೂ ಅವರಿಗೂ ಭಿನ್ನಾಭಿಪ್ರಾಯ ಬಂತು. ಅನಗತ್ಯವಾಗಿ ನನ್ನ ವಿರುದ್ಧ ಆರೋಪ ಮಾಡಿದ ಮೇಲೆ ಅವರ ಜೊತೆ ನಾನ್ಯಾಕೆ ಇರಬೇಕು? ಎಂದು ಪ್ರಶ್ನಿಸಿದರು.
ನಾನು ಇನ್ನೂ ಪಕ್ಷನೇ ಬಿಟ್ಟಿಲ್ಲ. ಜಾತ್ರೆ ಇರುವುದರಿಂದ ಬರಲು ಆಗಲ್ಲ ಅಂದ್ರೆ ಚಾಕು, ಚೂರಿ ಹಾಕಿ ಹೋದ ಎಂದು ಮಾತನಾಡಿದ್ರೆ ಅವರ ಜೊತೆ ನನಗೇನು ಕೆಲಸ. ಹಾಗಾಗಿ ಭಿನ್ನಾಭಿಪ್ರಾಯ ಆರಂಭವಾಯಿತು. ರಾಜ್ಯಸಭಾ ಚುನಾವಣೆಯಲ್ಲಿ ಲೆಹರ್ ಸಿಂಗ್ ಗೆ ವೋಟ್ ಹಾಕಿದರೆ 5 ಕೋಟಿ ಕೊಡುತ್ತೇವೆ ಎಂದರು, ನನ್ನ ಜೀವನದಲ್ಲಿ ಯಾರಿಗೂ ಮಾನ ಮರ್ಯಾದೆ ಮಾರಿಕೊಂಡು ಜೀವನ ಮಾಡಿಲ್ಲ. ಇಂದು ಶಿವಲಿಂಗೇಗೌಡ ಎಂದರೆ ಕರ್ನಾಟಕದಲ್ಲಿ ಒಂದು ಹೆಸರಿದೆ. ಭಿನ್ನಾಭಿಪ್ರಾಯ ಬಂತು ಹಾಗಾಗಿ ದೂರವಾಗಿದ್ದೀವಿ. ನನ್ನ ಕ್ಷೇತ್ರದ ಜನರ ಒತ್ತಾಯದ ಮೇರೆಗೆ ಕಾಂಗ್ರೆಸ್ ಗೆ ಸೇರಿದ್ದೇನೆ ಎಂದು ಹೇಳಿದರು.