ಬೆಂಗಳೂರು: ಬಿಟ್ ಕಾಯಿನ್ ಹಗರಣ ದೊಡ್ಡ ವಿಷಯವಲ್ಲ, ಮಹತ್ವದ್ದಲ್ಲ ಅಂದ ಮೇಲೆ ಚಾರ್ಜ್ ಶೀಟ್ ಏಕೆ ಹಾಕಿದ್ರಿ? ಜಾರಿ ನಿರ್ದೇಶನಾಲಯಕ್ಕೆ ಏಕೆ ತನಿಖೆಗೆ ಬರೆದಿದ್ದೀರಿ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ಹಗರಣದ ಬಗ್ಗೆ ಬಿಜೆಪಿಯಿಂದಲೇ ಮಾಹಿತಿ ಸಿಕ್ಕಿದೆ. ಬಿಜೆಪಿಯವರೇ ನಮಗೆ ಮಾಹಿತಿ ಕೊಡುತ್ತಿದ್ದಾರೆ. ತನಿಖೆ ನಡೆಸಲು ನಮ್ಮ ಬಳಿ ಸರ್ಕಾರವಿಲ್ಲ. ಬಿಟ್ ಕಾಯಿನ್ ಹಗರಣ ಏನೂ ಅಲ್ಲ ಅಂದ ಮೇಲೆ ಚಾರ್ಜ್ ಶೀಟ್ ಯಾಕೆ ಹಾಕಿದರು? ಬೆಂಕಿ ಇಲ್ಲದೇ ಹೊಗೆ ಆಡುತ್ತಾ? ಎಂದು ಪ್ರಶ್ನಿಸಿದ್ದಾರೆ.
ಐಷಾರಾಮಿ ಕಾರಿನ ಬಾನೆಟ್ ಮೇಲೆ ಬೀದಿ ಆಹಾರ ಸವಿದ ನಟ…!
ಇಬ್ಬರು ಮಂತ್ರಿಗಳು ಅನಗತ್ಯವಾಗಿ ಗಾಸಿಪ್ ಮಾಡುತ್ತಿದ್ದಾರೆ ಎಂದು ಗೃಹ ಸಚಿವರು ಹೇಳಿಕೆ ನೀಡಿದ್ದಾರೆ. ಯಾರು ಆ ಸಚಿವರು? ಅವರ ಮೇಲೆ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಕಾಲಹರಣ ಮಾಡುತ್ತಿರುವುದರ ಉದ್ದೇಶವೇನು? ಓರ್ವ ವ್ಯಕ್ತಿ ಬಿಟ್ ಕಾಯಿನ್ ವಿಚಾರವಾಗಿ ಪ್ರಧಾನಿಯವರಿಗೆ ಪತ್ರ ಬರೆದು ಮಂತ್ರಿಗಳ ಹೆಸರು ಸೇರಿ ಎಲ್ಲವನ್ನೂ ಉಲ್ಲೇಖಿಸಿದ್ದಾರೆ ಈ ಎಲ್ಲದರ ಬಗ್ಗೆ ಸರ್ಕಾರ ಸ್ಪಷ್ಟ ಮಾಹಿತಿಯನ್ನು ಜನರ ಮುಂದಿಡಲಿ ಎಂದು ಹೇಳಿದರು.