ನವದೆಹಲಿ; ಎಲ್ಲವೂ ಒಳ್ಳೆಯದಾಗಿದೆ, ಒಳ್ಳೆಯದಾಗಲಿದೆ ಎಂದು ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಶಾಸಕಾಂಗ ಪಕ್ಷದ ಸಭೆಯಲ್ಲಿ ಒಂದು ಲೈನ್ ನಿರ್ಣಯ ಪಾಸ್ ಮಾಡಿದ್ದೆವು. ರಾಹುಲ್ ಗಾಂಧಿಯವರು ಕರೆ ಮಾಡಿ ಮಾತನಾಡಿದ್ದರು. ಎಲ್ಲರೂ ಜೊತೆಯಾಗಿ ಹೋಗಬೇಕು ಅಂತಾ ಹೇಳಿದ್ದರು. ಹೈಕಮಾಂಡ್ ಸೂತ್ರವನ್ನು ನಾವೆಲ್ಲಾ ಒಪ್ಪಿಕೊಂಡಿದ್ದೇವೆ ಎಂದು ಹೇಳಿದರು.
ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿಗೆ ತೆರಳುತ್ತೇವೆ. ಸಂಜೆ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ನಾಳೆ ಮತ್ತೆ ವಾಪಸ್ ದೆಹಲಿಗೆ ಬರುತ್ತೇವೆ ಎಂದು ಹೇಳಿದರು.