ಬೆಂಗಳೂರು: ನಾಯಕತ್ವ ಬದಲಾವಣೆ ಕೂಗು ಹೆಚ್ಚುತ್ತಿರುವ ಬೆನ್ನಲ್ಲೇ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡಿ ಬಂಡಾಯ ಉಪಶಮನಕ್ಕೆ ಯತ್ನ ನಡೆಸಲಿದ್ದು, ಮೂರು ದಿನಗಳ ರಾಜ್ಯ ಪ್ರವಾಸಕ್ಕಾಗಿ ಈಗಾಗಲೇ ದೆಹಲಿಯಿಂದ ಕರ್ನಾಟಕದತ್ತ ಅರುಣ್ ಸಿಂಗ್ ಹೊರಟಿದ್ದಾರೆ.
ದೆಹಲಿಯಿಂದ ಹೊರಡುವ ಮುನ್ನ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅರುಣ್ ಸಿಂಗ್, ಏನೇ ಹೇಳುವುದಿದ್ದರು ಕರ್ನಾಟಕಕ್ಕೆ ಭೇಟಿ ನೀಡಿ ಅಲ್ಲಿಯೇ ಹೇಳುತ್ತೇನೆ ಎಂದು ಹೇಳಿದರು.
ಮಧ್ಯಾಹ್ನ 3:30ಕ್ಕೆ ಬೆಂಗಳೂರಿಗೆ ಆಗಮಿಸಲಿರುವ ಅರುಣ್ ಸಿಂಗ್ 3 ದಿನಗಳ ಕಾಲ ರಾಜ್ಯದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈ ವೇಳೆ ನಾಯಕತ್ವ ಬದಲಾವಣೆ ಚರ್ಚೆ, ಅಸಮಾಧಾನ, ಪಕ್ಷದಲ್ಲಿನ ಬೆಳವಣಿಗಳ ಬಗ್ಗೆ ಸಚಿವರು, ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ನಾಳೆಯೇ ಸಿಎಂ ಬಿ ಎಸ್ ವೈ ಭವಿಷ್ಯ ಕೂಡ ನಿರ್ಧಾರವಾಗಲಿದೆ.
ಒಟ್ಟಾರೆ ಅರುಣ್ ಸಿಂಗ್ ರಾಜ್ಯ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದು, ಬಿಜೆಪಿ ಬಂಡಾಯ ಶಮನ ಮಾಡಿ, ಅಸಮಾಧಾನಕ್ಕೆ ತೆರೆ ಎಳೆಯಲಿದ್ದಾರಾ ಅಥವಾ ಸಿಎಂ ಬದಲಾವಣೆಗೆ ಸೂಚಿಸಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.