ಲಾಹೋರ್: ಕೊರೊನಾ ಸಂಕಷ್ಟದ ನಡುವೆ ಭೀಕರ ರೈಲು ಅಪಘಾತ ಸಂಭವಿಸಿದ್ದು, ಎರಡು ಎಕ್ಸ್ ಪ್ರೆಸ್ ರೈಲುಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ 30 ಜನರು ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ಘೋಟ್ಕಿ ಬಳಿ ಸಂಭವಿಸಿದೆ.
ಲಾಹೋರ್ ಕಡೆ ಹೊರಟಿದ್ದ ಸರ್ ಸಯ್ಯದ್ ಎಕ್ಸ್ ಪ್ರೆಸ್ ರೈಲು ಹಾಗೂ ಕರಾಚಿಯಿಂದ ಸರ್ ಗೊಡಾ ಕಡೆ ತೆರಳುತ್ತಿದ್ದ ಮಿಲ್ಲತ್ ಎಕ್ಸ್ ಪ್ರೆಸ್ ರೈಲಿನ ನಡುವೆ ಅಪಘಾತ ಸಂಭವಿಸಿದೆ. ಘೋಟ್ಕಿ ಸಮೀಪದ ರೇತಿ ಹಾಗೂ ದರಾರ್ಕಿ ರೈಲು ನಿಲ್ದಾಣಗಳ ಮಧ್ಯೆ ಈ ದುರ್ಘಟನೆ ಸಂಭವಿಸಿದ್ದು, 30 ಜನರು ಮೃತಪಟ್ಟಿದ್ದಾರೆ 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
13 ಬೋಗಿಗಳು ಹಳಿತಪ್ಪಿದ್ದು, 8 ಬೋಗಿಗಳು ಸಂಪೂರ್ಣ ನುಜ್ಜುಗುಜ್ಜಾಗಿವೆ. ರೈಲಿನ ಅವಶೇಷಗಳಡಿಯಲ್ಲಿ ಹಲವರು ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.