ಎಚ್‌ಡಿಎಫ್‌ಸಿ ಕೂಡ ದೇಶದ ಪ್ರಮುಖ ಜೀವ ವಿಮಾ ಕಂಪನಿಗಳಲ್ಲೊಂದು. ನೀವು ಎಚ್‌ಡಿಎಫ್‌ಸಿ ಲೈಫ್‌ನ ಗ್ರಾಹಕರಾಗಿದ್ದರೆ, ನಿಮಗೆ ಗುಡ್ ನ್ಯೂಸ್ ಕಾದಿದೆ. DFC Life ತನ್ನ 5.87 ಲಕ್ಷ ಪಾಲಿಸಿದಾರರಿಗೆ ಪ್ರಚಂಡ ಬೋನಸ್ ನೀಡಲು ಮುಂದಾಗಿದೆ. ಎಲ್ಲಾ ಯೋಜನೆಗಳ ಪೈಕಿ ಅತಿ ಹೆಚ್ಚು ಬೋನಸ್ ಅನ್ನು ನೀಡಲಾಗ್ತಿದೆ. ಪಾಲಿಸಿದಾರರಿಗೆ ಒಟ್ಟಾರೆ 2465 ಕೋಟಿ ರೂಪಾಯಿ ಬೋನಸ್ ಸಿಗಲಿದೆ.
ಎಚ್‌ಡಿಎಫ್‌ಸಿ ಲೈಫ್ ತನ್ನ 5.87 ಲಕ್ಷ ಪಾಲಿಸಿದಾರರಿಗೆ 2,465 ಕೋಟಿ ರೂಪಾಯಿ ಬೋನಸ್ ನೀಡಲಿದೆ. ಈ ಪೈಕಿ 1,803 ಕೋಟಿ ರೂಪಾಯಿಗಳನ್ನು ಪಾಲಿಸಿದಾರರಿಗೆ ಅದೇ ಹಣಕಾಸು ವರ್ಷದಲ್ಲಿ ನಗದು ಬೋನಸ್ ಆಗಿ ನೀಡಲು ಮುಂದಾಗಿದೆ. ನಂತರ ಬಾಕಿ ಉಳಿದಿರುವ ಬೋನಸ್ ಅನ್ನು ವಿಮಾ ಪಾಲಿಸಿಯ ಮುಕ್ತಾಯದ ಬಳಿಕ, ಮರಣ ಅಥವಾ ಪಾಲಿಸಿ ಸರೆಂಡರ್ ಸಂದರ್ಭದಲ್ಲಿ ಪಾವತಿಸಲಾಗುತ್ತದೆ.
ತಾವು ಕಷ್ಟಪಟ್ಟು ದುಡಿದ ಹಣವನ್ನು ಹೂಡಿಕೆ ಮಾಡಿದ ಪಾಲಿಸಿದಾರರ ವಿಶ್ವಾಸವನ್ನು ಗೆಲ್ಲಲು ಈ ಪ್ರಯತ್ನ. ಜೊತೆಗೆ ತಮ್ಮನ್ನು ಮತ್ತು ತಮ್ಮ ಪ್ರೀತಿಪಾತ್ರರನ್ನು ಆರ್ಥಿಕವಾಗಿ ಬಲಪಡಿಸಲು ಪ್ರಯತ್ನಿಸುತ್ತಿರುವವರಿಗೆ ನಾವು ಬೆಂಬಲವಾಗಿ ನಿಂತಿದ್ದೇವೆ ಎಂದು ಎಚ್‌ಡಿಎಫ್‌ಸಿ ಲೈಫ್ ಅಧಿಕಾರಿಗಳು ಹೇಳಿಕೊಂಡಿದ್ದಾರೆ. 2000ನೇ ಇಸ್ವಿಯಲ್ಲಿ ಮೊದಲ ಬಾರಿಗೆ ಎಚ್‌ಡಿಎಫ್‌ಸಿ ಲೈಫ್ ವಿಮಾ ಕ್ಷೇತ್ರವನ್ನು ಪ್ರವೇಶಿಸಿತ್ತು.
ಸದ್ಯ ಜೀವ ರಕ್ಷಣೆ, ಉಳಿತಾಯ, ಹೂಡಿಕೆ, ವರ್ಷಾಶನ ಮತ್ತು ಆರೋಗ್ಯ ಯೋಜನೆಗಳನ್ನು ಗ್ರಾಹಕರಿಗೆ ನೀಡುತ್ತಿದೆ. ಅಷ್ಟೇ ಅಲ್ಲ ಎಚ್‌ಡಿಎಫ್‌ಸಿ ಲೈಫ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಲಿಸ್ಟ್ ಆಗಿದ್ದು, ಅದರ ಷೇರುಗಳು ಬೆಲೆ 554 ರೂಪಾಯಿ ಇತ್ತು. ಆದರೆ ಈ ಸುತ್ತಿನ ಮಾರಾಟದಲ್ಲಿ ಅದರ ಷೇರುಗಳ ಮೌಲ್ಯ ಶೇ.29ರಷ್ಟು ಕುಸಿದಿದೆ.