ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ನಡುವೆಯೇ ಎಂಇಎಸ್ ಮತ್ತೆ ಭಾಷಾ ವಿವಾದದ ಕ್ಯಾತೆಗೆ ಮುಂದಾಗಿದ್ದು, ಬೆಳಗಾವಿಯಲ್ಲಿ ನೂತನ ಬಸ್ ನಿಲ್ದಾಣಕ್ಕೆ ಮರಾಠಿ ಫಲಕ ಹಾಕುವಂತೆ ಒತ್ತಾಯಿಸಿದೆ.
ಬೆಳಗಾವಿಯ ನೂತನ ಬಸ್ ನಿಲ್ದಾಣಕ್ಕೆ ಮರಾಠಿ ಫಲಕ ಹಾಕುವಂತೆ ಎಂಇಎಸ್ ಕಾರ್ಯಕರ್ತರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಡಿಸಿ ಪಿ.ವೈ. ನಾಯಕ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಪ್ರತಿಕ್ರಿಯಿಸಿದ ಡಿಸಿ ಪಿ.ವೈ. ನಾಯಕ್, ಕನ್ನಡ, ಇಂಗ್ಲೀಷ್ ಫಲಕ ಮಾತ್ರ ಹಾಕುತ್ತೇವೆ. ಮರಾಠಿ ಫಲಕ ಅಳವಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದ ಎಂಇಎಸ್ ಕಾರ್ಯಕರ್ತರು ಮೌನವಾಗಿ ಹಿಂತಿರುಗಿದ್ದಾರೆ ಎನ್ನಲಾಗಿದೆ.