ಬೆಂಗಳೂರು: ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ ಅಖಾಡ ರಂಗೇರಿದ್ದು, ಕುರುಡು ಕಾಂಚಾಣದ ಸದ್ದು ಜೋರಾಗಿದೆ ಎಂಬ ಮಾತು ಕೇಳಿಬರುತ್ತಿದೆ. ವೋಟಿಗಾಗಿ ಬಿಜೆಪಿ ನಾಯಕರು ಹಣದ ಹೊಳೆಯನ್ನೇ ಹರಿಸಿದ್ದಾರೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ನಾಯಕರು ಉಪಚುನಾವಣೆಯಲ್ಲಿ ಗೆಲ್ಲಲು ಹಣದ ಹೊಳೆ ಹರಿಸಿದ್ದಾರೆ. ಒಂದು ವೋಟಿಗಾಗಿ 2 ಸಾವಿರ ರೂಪಾಯಿ ಕೊಡುತ್ತಿರುವುದಾಗಿ ಮಾಹಿತಿ ಬಂದಿದೆ. ಸ್ವತಃ ಕ್ಷೇತ್ರದ ಜನರು ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಎಲ್‌ಐಸಿ ಯ ಈ ʼಮ್ಯೂಚುವಲ್ ಫಂಡ್ʼ ಸ್ಕೀಂ ನಲ್ಲಿ 5 ವರ್ಷಗಳಲ್ಲಿ ದುಪ್ಪಟ್ಟಾಗಿದೆ ಹೂಡಿಕೆದಾರರ ಹಣ
ಬಿಜೆಪಿ ಸರ್ಕಾರ ಅಭಿವೃದ್ಧಿ ಕೆಲಸಗಳಿಗಾಗಿ ಅಧಿಕಾರಕ್ಕೆ ಬಂದಿಲ್ಲ, ಹಣದ ಬಲದಿಂದ, ಅಧಿಕಾರದ ಆಸೆಗಾಗಿ ಪಟ್ಟಕ್ಕೇರಿದೆ. ಅವರಿಗೆ ಜನರ ಸಂಕಷ್ಟಕ್ಕೆ ಸ್ಪಂದಿಸುವುದು, ಸಮಸ್ಯೆ ಬಗೆಹರಿಸುವುದು ಯಾವುದೂ ಬೇಕಿಲ್ಲ. ಕೊರೊನಾ ಸೋಂಕಿನಿಂದ ಮಡಿದವರಿಗೆ ಪರಿಹಾರ ಘೋಷಿಸಿದರು, ಆದರೆ ಪರಿಹಾರ ನೀಡಿದರೇ? ಎರಡು ವರ್ಷದಿಂದ ಆಡಳಿತ ನಡೆಸುತ್ತಿದ್ದಾರೆ ಒಂದೇ ಒಂದು ಯೋಜನೆಯನ್ನು, ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆಯೇ? ಈಗ ಬೈ ಎಲೆಕ್ಷನ್ ನಲ್ಲಿ ಹಣದ ಹೊಳೆ ಹರಿಸಿ ಮತದಾರರನ್ನು ಸೆಳೆಯಲು ಆಮಿಷವೊಡ್ಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಏನೇ ಕಸರತ್ತು ಮಾಡಿದರೂ ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.