ಮಂಡ್ಯ: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕೂಡ ಮೇ 16ರಂದು ಮಂಡ್ಯದ ಹಲವು ಕಾಲೇಜುಗಳಲ್ಲಿ ಸಚಿವರು ಸಭೆ ನಡೆಸಿದ್ದರು. ಈ ಮೂಲಕ ಸಚಿವರೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಂಡಹಳ್ಳಿ ಮಂಜುನಾಥ್ ದೂರು ನೀಡಿದ್ದರು.
BIG NEWS: 30 ಸಾವಿರ ದೇವಾಲಯಗಳನ್ನು ವಾಪಸ್ ಪಡೆಯುತ್ತೇವೆ; ತಾಕತ್ತಿದ್ದರೆ ತಡೆಯಿರಿ; ಅಬ್ದುಲ್ ಮಜೀದ್ ಗೆ ಮುತಾಲಿಕ್ ಸವಾಲು
ಈ ಹಿನ್ನೆಲೆಯಲ್ಲಿ ಸಚಿವ ಅಶ್ವತ್ಥ ನಾರಾಯಣ ಹಾಗೂ ಬಿಜೆಪಿ ಅಭ್ಯರ್ಥಿ ಎಂ.ವಿ.ರವಿಶಂಕರ್ ವಿರುದ್ಧ ಐಪಿಸಿ ಸೆಕ್ಷನ್ 1860 ಹಾಗೂ ಪ್ರಜಾಪ್ರತಿನಿಧಿ ಕಾಯ್ದೆ 1950, 1951 ಅಡಿ ಪ್ರಕರಣ ದಾಖಲಾಗಿದೆ.