alex Certify BIG NEWS: ಉದ್ಯೋಗ ಸೃಷ್ಟಿಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಈಗಲೂ ನಂಬರ್‌ 1 | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಉದ್ಯೋಗ ಸೃಷ್ಟಿಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಈಗಲೂ ನಂಬರ್‌ 1

ರಾಜ್ಯ ರಾಜಧಾನಿ ಬೆಂಗಳೂರು ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ. ಹೀಗಾಗಿ ಸಿಲಿಕಾನ್‌ ಸಿಟಿಗೆ ಉದ್ಯೋಗ ಅರಸಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ಜನರು ಬರುತ್ತಾರೆ. ಈ ಕಾರಣಕ್ಕಾಗಿಯೇ ಉದ್ಯಾನ ನಗರಿ ಬೆಂಗಳೂರು ಉದ್ಯೋಗ ಸೃಷ್ಟಿಯಲ್ಲಿ ಯಾವಾಗಲೂ ನಂಬರ್‌ ಒನ್‌ ಸ್ಥಾನದಲ್ಲಿಯೇ ಇರುತ್ತದೆ.

ಇದು ಈ ಬಾರಿಯೂ ಮುಂದುವರೆದಿದ್ದು, ಉದ್ಯೋಗ ಸೃಷ್ಟಿಯಲ್ಲಿ ಬೆಂಗಳೂರು ಮತ್ತೆ ಎಂದಿನಂತೆ ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿದೆ. ಚಾಟ್‌ ಮೂಲಕ ಉದ್ಯೋಗ ನೀಡುವ ಫ್ಲಾಟ್‌ ಫಾರಂ Hirect ಸಮೀಕ್ಷೆಯಲ್ಲಿ ಈ ಸಂಗತಿ ಬಹಿರಂಗವಾಗಿದ್ದು, ಉದ್ಯೋಗ ಸೃಷ್ಟಿಯಲ್ಲಿ ಶೇ.17.6 ಪ್ರಮಾಣದೊಂದಿಗೆ ಬೆಂಗಳೂರು ಪ್ರಥಮ ಸ್ಥಾನದಲ್ಲಿದೆ.

ಇನ್ನುಳಿದಂತೆ ಶೇಕಡ 11.5 ಪ್ರಮಾಣದೊಂದಿಗೆ ರಾಷ್ಟ್ರ ರಾಜಧಾನಿ ನವದೆಹಲಿ ದ್ವಿತೀಯ ಸ್ಥಾನದಲ್ಲಿದ್ದರೆ, ಶೇಕಡ 10.4 ಪ್ರಮಾಣದೊಂದಿಗೆ ವಾಣಿಜ್ಯ ನಗರಿ ಮುಂಬೈ ಮೂರನೇ ಸ್ಥಾನದಲ್ಲಿದೆ. ನೋಯ್ಡಾ ಶೇಕಡ 6 ಪ್ರಮಾಣದೊಂದಿಗೆ ನಂತರದ ಸ್ಥಾನದಲ್ಲಿದೆ.

ಗಮನಾರ್ಹ ಸಂಗತಿಯೆಂದರೆ ಮಾರಾಟ ಮತ್ತು ವಾಣಿಜ್ಯ ವಿಭಾಗದಲ್ಲಿ ಶೇ.26.9 ಉದ್ಯೋಗಗಳು ಸೃಷ್ಟಿಯಾಗಿದ್ದರೆ, ಐಟಿ ವಲಯದಲ್ಲಿ 20.6 ಶೇಕಡ ಉದ್ಯೋಗಗಳು ಸೃಷ್ಟಿಯಾಗಿವೆ. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಐಟಿ ವಲಯದಲ್ಲಿ ಅತಿ ಹೆಚ್ಚು ಉದ್ಯೋಗಗಳು ಈ ಬಾರಿ ಸೃಷ್ಟಿಯಾಗಿವೆ.

ಮತ್ತೊಂದು ಇಂಟ್ರಸ್ಟಿಂಗ್‌ ಸಂಗತಿಯೆಂದರೆ ಈ ಮೊದಲಿನಂತೆ ಉದ್ಯೋಗಿಗಳನ್ನು ಹೆಚ್.ಆರ್.‌ ಗಳು ನೇಮಕ ಮಾಡಿಕೊಂಡಿಲ್ಲ. ಬದಲಾಗಿ ಕಂಪನಿಗಳ ಉನ್ನತ ಅಧಿಕಾರಿಗಳೇ ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಇವುಗಳೆಲ್ಲದ್ದಕ್ಕಿಂತ ಮಿಗಿಲಾಗಿ ಉದ್ಯೋಗಿಗಳಿಗೆ ಅವರ ಕೆಲಸದ ಆಯ್ಕೆಯನ್ನು ಸಹ ನೀಡಲಾಗಿರುವುದು ಸಮೀಕ್ಷೆಯಲ್ಲಿ ಕಂಡು ಬಂದಿದೆ.

ಅಲ್ಲದೇ ನೇಮಕಾತಿ ಸಂದರ್ಭದಲ್ಲಿ ಉದ್ಯೋಗಾಕಾಂಕ್ಷಿಗಳ ಪದವಿ ಸರ್ಟಿಫಿಕೇಟ್ ಗಳ ಬದಲಾಗಿ ಅವರ ನೈಪುಣ್ಯತೆಯನ್ನು ಹೆಚ್ಚಾಗಿ ಪರಿಗಣಿಸಲಾಗಿದೆ. ಡಿಗ್ರಿ ಸರ್ಟಿಫಿಕೇಟ್‌ ಗಳ ಅಂಕಗಳ ಮೇಲೆ ಈ ನೇಮಕಾತಿ ನಡೆದಿಲ್ಲವೆಂಬುದು ಗಮನಾರ್ಹ ಸಂಗತಿ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...