ನವದೆಹಲಿ: 75ನೇ ಸ್ವಾತಂತ್ರೋತ್ಸವ ಹಿನ್ನೆಲೆಯಲ್ಲಿ ದೇಶದಲ್ಲಿ ಉಗ್ರ ಸಂಘಟನೆಗಳು ದುಷ್ಕೃತ್ಯವೆಸಗಲು ಸಂಚು ರೂಪಿಸಿವೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಗೂ ಮೊದಲು ಲಷ್ಕರ್-ಎ-ತೊಯ್ಬಾ, ಜೈಶ್-ಎ-ಮೊಹಮ್ಮದ್ ಹಾಗೂ ಇತರ ಮೂಲಭೂತ ಉಗ್ರ ಸಂಘಟನೆಗಳು ಸಂಭವನೀಯ ದಾಳಿ ನಡೆಸುವ ಸಾಧ್ಯತೆ ಬಗ್ಗೆ ಐಬಿ ಎಚ್ಚರಿಕೆ ನೀಡಿದೆ. ಈ ಬಗ್ಗೆ 10 ಪುಟಗಳ ವರದಿಯಲ್ಲಿ ಐಬಿ ಕಟ್ಟೆಚ್ಚರಕ್ಕೆ ಸೂಚಿಸಿದೆ.
ಕೆಂಪುಕೋಟೆಯಲ್ಲಿ ಕಟ್ಟುನಿಟ್ಟಾದ ಪ್ರವೇಶ ನಿಯಮಗಳನ್ನು ಜಾರಿಗೆ ತರಲು ದೆಹಲಿ ಪೊಲಿಸರಿಗೆ ನಿರ್ದೇಶನ ನೀಡಿದೆ. ಅಲ್ಲದೇ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಮೇಲಿನ ದಾಳಿ, ಉದಯಪುರ ಹಾಗೂ ಅಮರಾವತಿಯಲ್ಲಿ ನಡೆದ ದಾಳಿ ವಿಚಾರವನ್ನು ಉಲ್ಲೇಘಿಸಿದ್ದು, ಆಗಸ್ಟ್ 15ರಂದು ಕಟ್ಟುನಿಟ್ಟಾದ ಪ್ರದೇಶ ನಿಯಮಗಳನ್ನು ಜಾರಿಗೆ ತರುವಂತೆ ಸೂಚಿಸಿದೆ.