ಬೆಂಗಳೂರು: ವಿ.ಎಸ್. ಉಗ್ರಪ್ಪ ಹಾಗೂ ಸಲೀಂ ನನ್ನ ವಿರುದ್ಧ ಆಡಿರುವ ಮಾತುಗಳಿಗೂ, ನನಗೂ, ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಅದು ಅವರಿಬ್ಬರ ಆಂತರಿಕ ಮಾತುಗಳು ಹೊರತು ಪಕ್ಷದ ಹೇಳಿಕೆಗಳಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಕಲೆಕ್ಷನ್ ಗಿರಾಕಿ, ಪರ್ಸಂಟೇಜ್ ಹೆಚ್ಚಿಸಿದ್ದಾರೆ ಎಂಬ ಉಗ್ರಪ್ಪ ಹಾಗೂ ಸಲೀಂ ಅವರ ಸಂಭಾಷಣೆ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಶಿಸ್ತಿನ ಪಕ್ಷ ಈ ನಿಟ್ಟಿನಲ್ಲಿ ಇಬ್ಬರು ನಾಯಕರ ವಿರುದ್ಧ ಕಾಂಗ್ರೆಸ್ ಶಿಸ್ತು ಪಾಲನಾ ಸಮಿತಿ ಕ್ರಮ ಕೈಗೊಂಡಿದೆ. ಇಬ್ಬರು ನಾಯಕರ ಹೇಳಿಕೆಯನ್ನು ನಾನೂ ಮಾಧ್ಯಮಗಳ ಮೂಲಕ ಗಮನಿಸಿದ್ದೇನೆ. ಅದು ಪಕ್ಷದ ಹೇಳಿಕೆಯಲ್ಲ ಸಲೀಂ ಹಾಗೂ ಉಗ್ರಪ್ಪ ಅವರಿಬ್ಬರ ಆಂತರಿಕ ಮಾತುಗಳು ಹಾಗಾಗಿ ಅವರ ಹೇಳಿಕೆಗಳಿಗೂ ನನ್ನ ವಿರುದ್ಧದ ಅವರ ಆರೋಪಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.
9 ಗಂಟೆಗಳಲ್ಲಿ 51 ಪಬ್ ಗಳಿಗೆ ಭೇಟಿ: ವ್ಯಕ್ತಿಯಿಂದ ಹೊಸ ದಾಖಲೆ
ಉಗ್ರಪ್ಪ ಹಾಗೂ ಸಲೀಂ ಏನು ಮಾತನಾಡಿದ್ದಾರೆ ಅದನ್ನು ಮಾಧ್ಯಮಗಳು ತೋರಿಸಿವೆ ಇದರಲ್ಲಿ ಮಾಧ್ಯಮಗಳ ತಪ್ಪಿಲ್ಲ. ಆದರೆ ಇಬ್ಬರು ನಾಯಕರ ಹೇಳಿಕೆಗಳು ಪಕ್ಷಕ್ಕೆ ಹಾಗೂ ನಮಗೆ ಮುಜುಗರವುಂಟು ಮಾಡಿದೆ. ನನಗೆ ಯಾವುದೇ ಪರ್ಸಂಟೇಜ್ ತೆಗೆದುಕೊಳ್ಳುವ ಅಗತ್ಯವಿಲ್ಲ. ಅಗತ್ಯವಿದ್ದರೆ ಗೃಹ ಸಚಿವರು ಸ್ವಯಂ ಪ್ರೇರಿತ ಕೇಸ್ ದಾಖಲಿಸಿ ತನಿಖೆ ನಡೆಸಲಿ ಎಂದು ಹೇಳಿದರು.
ರಾಜಕಾರಣದಲ್ಲಿ ಚಪ್ಪಾಳೆ ಹೊಡೆಯುವವರೂ ಇರುತ್ತಾರೆ, ಕಲ್ಲು ಎಸೆಯುವವರು ಇರುತ್ತಾರೆ, ಮೊಟ್ಟೆ, ಚಪ್ಪಲಿ ಎಸೆಯುವವರು ಇರುತ್ತಾರೆ ಜೈಕಾರ ಹಾಕುವವರು ಇರುತ್ತಾರೆ. ಇದೆಲ್ಲವೂ ರಾಜಕೀಯದ ಒಂದು ಭಾಗ, ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದರು.
ಶ್ವಾನದ ಸೀಮಂತ ಕಾರ್ಯ ನೆರವೇರಿಸಿದ ಕುಟುಂಬ: ಫೋಟೋ ವೈರಲ್…..!
ಇನ್ನು ನನ್ನ ಬಾಡಿ ಲಾಂಗ್ವೇಜ್ ಬಗ್ಗೆ ಮಾತನಾಡಿದ್ದಾರೆ ನಾನು ಹಳ್ಳಿಯಿಂದ ಬಂದವನು. ನನ್ನ ಬಾಡಿ ಲಾಂಗ್ವೇಜ್ ಯಾರೂ ಬದಲಿಸಲು ಆಗಲ್ಲ. ನನಗೆ ನನ್ನದೇ ಆದ ವ್ಯಕ್ತಿತ್ವ ಇದೆ, ನನ್ನದೇ ಆದ ಮಾತಿನ ಶೈಲಿಯಿದೆ. ನನಗೆ ನನ್ನದೇ ಆದ ನಡತೆ ಇದೆ. ನನ್ನ ಬಾಡಿ ಲಾಂಗ್ವೆಜ್ ಇರುವುದೇ ಹಾಗೆ. ಇನ್ನು ನಾನು ಯಾವುದೇ ಗುಂಪುಗಾರಿಕೆ ಮಾಡಲ್ಲ, ಮಾಡುವುದೂ ಇಲ್ಲ, ಯಾವುದೇ ಷಡ್ಯಂತ್ರ ನಡೆಸುವ ಅಗತ್ಯವೂ ನನಗಿಲ್ಲ. ಪಕ್ಷದ ನಾಯಕರಿಬ್ಬರೂ ಕೆಲ ಆಂತರಿಕ ವಿಚಾರವಾಗಿ ಮಾತನಾಡಿರುವುದು ನಿಜ. ಈ ನಿಟ್ಟಿನಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.