ಅಮೇರಿಕದ ಸ್ಯಾಟಲೈಟ್ ಕಂಪನಿ ಮ್ಯಾಕ್ಸರ್ ಟೆಕ್ನಾಲಜೀಸ್, ಸೋಮವಾರ ಒದಗಿಸಿರುವ ಉಪಗ್ರಹ ಚಿತ್ರಗಳಲ್ಲಿ ರಷ್ಯಾ ಪಡೆ ಉಕ್ರೇನ್ ರಾಜಧಾನಿಯನ್ನು ಮತ್ತಷ್ಟು ಆವರಿಸಿರುವುದು ಕಂಡು ಬಂದಿದೆ. ಹಿಂದಿನ ದಿನಕ್ಕೆ ಹೋಲಿಸಿದರೆ, ಕೈವ್‌ನ ಉತ್ತರ ಭಾಗದಲ್ಲಿ ಹೆಚ್ಚು ರಷ್ಯನ್ ಸೈನಿಕ ಪಡೆ ಇದೆ ಎಂದು ಮ್ಯಾಕ್ಸರ್ ಸಂಸ್ಥೆ ತಿಳಿಸಿದೆ.
ಹಿಂದಿನ ದಿನ 17 ಮೈಲಿಗಳಷ್ಟು ಭೂ ಪ್ರದೇಶವನ್ನು ಆವರಿಸಿದ್ದ ರಷ್ಯಾದ ಮಿಲಿಟರಿ ಬೆಂಗಾವಲು ಪಡೆ, ಈಗ ಸುಮಾರು 40 ಮೈಲುಗಳು ಅಂದರೆ 64 ಕಿಮೀ ವರೆಗೆ ವ್ಯಾಪಿಸಿದೆ. ಇದು ಗಣನೀಯ ಏರಿಕೆ ಎಂದು ಮ್ಯಾಕ್ಸರ್ ತಿಳಿಸಿದೆ.
ಉತ್ತರ ಉಕ್ರೇನ್‌ನಿಂದ ಕೇವಲ ಇಪ್ಪತ್ತು ಮೈಲಿ ದೂರದಲ್ಲಿ, ಅಂದರೆ ದಕ್ಷಿಣ ಬೆಲಾರಸ್‌ನಲ್ಲಿ ರಷ್ಯಾದ ಹೆಲಿಕಾಪ್ಟರ್ ಘಟಕಗಳು ಹಾಗೂ ಹೆಚ್ಚುವರಿ ಭೂ ಪಡೆಗಳ ನಿಯೋಜನೆ ಕಂಡು ಬಂದಿದೆ ಎಂದು ಮ್ಯಾಕ್ಸರ್ ತಿಳಿಸಿದೆ.