ಕಳೆದ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿಯ ಜಂಟಿ ನೊಬೆಲ್ ಪ್ರಶಸ್ತಿ ವಿಜೇತ, ರಷ್ಯಾದ ಪತ್ರಕರ್ತ ಡಿಮಿಟ್ರಿ ಮುರಾಟೊವ್ ತಮ್ಮ ನೊಬೆಲ್ ಪದಕವನ್ನು ಉಕ್ರೇನಿಯನ್ ನಿರಾಶ್ರಿತರಿಗೆ ಸಹಾಯ ಮಾಡಲು ಮತ್ತು ಅವರಿಗಾಗಿ ಹಣವನ್ನು ಸಂಗ್ರಹಿಸಲು ದಾನ ಮಾಡುತ್ತಿರುವುದಾಗಿ ಹೇಳಿದ್ದಾರೆ.
ರಷ್ಯಾದ ಪ್ರಮುಖ ವಿರೋಧ ಪತ್ರಿಕೆ ನೊವಾಯಾ ಗೆಜೆಟಾದ ಸಂಪಾದಕರಾದ ಮುರಾಟೋವ್ ಫಿಲಿಪೈನ್ಸ್‌ನ ಮಾರಿಯಾ ರೆಸ್ಸಾರೊಂದಿಗೆ “ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡುವ” ಪ್ರಯತ್ನಗಳಿಗಾಗಿ 2021ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
“ನನ್ನ ಪತ್ರಿಕೆ ಮತ್ತು ನಾನು ಉಕ್ರೇನಿಯನ್ ನಿರಾಶ್ರಿತರಿಗೆ ಸಹಾಯ ಮಾಡುವ ನಿಧಿಗೆ ಚಿನ್ನದ ಪದಕವನ್ನು ನೀಡಲು ನಿರ್ಧರಿಸಿದ್ದೇವೆ. ಈ ವಿಶ್ವ ಪ್ರಸಿದ್ಧ ಪದಕವನ್ನು ಹರಾಜು ಹಾಕುವ ಮೂಲಕ ಉಕ್ರೇನ್ ನಿರಾಶ್ರಿತರಿಗೆ ದೇಣಿಗೆ ಸಂಗ್ರಹಿಸಿ ನೀಡುವಂತೆ ನಾನು ಕೇಳಿಕೊಳ್ಳುತ್ತಿದ್ದೇನೆ ಎಂದು ಮೊರಾಟೋವ್ ಟೆಲಿಗ್ರಾಂನಲ್ಲಿ ಬರೆದಿದ್ದಾರೆ.
ಈಗಾಗಲೇ 10 ಮಿಲಿಯನ್‌ಗೂ ಹೆಚ್ಚು ನಿರಾಶ್ರಿತರು ಇದ್ದಾರೆ. ಈ ವಿಶ್ವಪ್ರಸಿದ್ಧ ಪ್ರಶಸ್ತಿಯನ್ನು ಹರಾಜು ಹಾಕಲು ನಾನು ಹರಾಜು ಸಂಸ್ಥೆಗಳಿಗೆ ಮನವಿ ಮಾಡುತ್ತೇನೆ ಎಂದಿದ್ದಾರೆ.