alex Certify Big News: ಉಕ್ರೇನ್ ನಲ್ಲಿರುವ ಭಾರತೀಯರನ್ನು ಕರೆತರಲಿದೆ ಏರ್​ ಇಂಡಿಯಾ ವಿಶೇಷ ವಿಮಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: ಉಕ್ರೇನ್ ನಲ್ಲಿರುವ ಭಾರತೀಯರನ್ನು ಕರೆತರಲಿದೆ ಏರ್​ ಇಂಡಿಯಾ ವಿಶೇಷ ವಿಮಾನ

ಟಾಟಾ ಒಡೆತನದ ಏರ್​ ಇಂಡಿಯಾದ ವಿಶೇಷ ವಿಮಾನವು ಇಂದು ರಾತ್ರಿ ಉಕ್ರೇನ್​ ವಿಮಾನ ನಿಲ್ದಾಣದಿಂದ ಸುರಕ್ಷಿತ ವಾಪಸ್ಸಾತಿಗಾಗಿ ವಾಪಸ್ಸಾತಿಗಾಗಿ ನೋಂದಾಯಿಸಿಕೊಂಡಿದ್ದ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ಪ್ರಜೆಗಳನ್ನು ವಾಪಸ್​ ಕರೆದುಕೊಂಡು ಹೋಗಲಿದೆ.

ಏರ್​ ಇಂಡಿಯಾದ ಮೊದಲ ವಿಶೇಷ ವಿಮಾನವು ಉಕ್ರೇನ್​ನಿಂದ ಭಾರತಕ್ಕೆ ಇಂದು ರಾತ್ರಿ ಹಾರಾಟ ನಡೆಸಲಿದೆ ಎಂದು ಏರ್​ಲೈನ್​ನ ಅಧಿಕಾರಿಯೊಬ್ಬರು ಅಧಿಕೃತ ಮಾಹಿತಿಯನ್ನು ನೀಡಿದ್ದಾರೆ.

ಸೋಮವಾರದಂದು ಏರ್​ ಇಂಡಿಯಾ ವಿಮಾನವು ಸ್ವದೇಶಕ್ಕೆ ಮರಳಲು ಇಚ್ಛಿಸುವ ಭಾರತೀಯ ಪ್ರಜೆಗಳನ್ನು ಮರಳಿ ತರಲು ಉಕ್ರೇನ್​​ಗೆ ಹೊರಟಿತ್ತು. ಉಕ್ರೇನ್​ನಿಂದ ಭಾರತಕ್ಕೆ ಒಟ್ಟು ಮೂರು ವಿಮಾನಗಳು ಹಾರಾಟ ನಡೆಸಲಿದೆ ಎಂದು ಏರ್​ ಇಂಡಿಯಾ ಈ ಹಿಂದೆಯೇ ಘೋಷಣೆ ಮಾಡಿತ್ತು. ಇದರಲ್ಲಿ ಮೊದಲ ವಿಮಾನ ಇಂದು ರಾತ್ರಿ ಹಾರಾಟ ನಡೆಸಲಿದೆ.

ಉಕ್ರೇನ್​ನಿಂದ ಭಾರತಕ್ಕೆ ಏರ್​ ಇಂಡಿಯಾ ಮೂರು ವಿಮಾನಗಳ ಕಾರ್ಯಾಚರಣೆ ನಡೆಸಲಿದೆ. ಫೆಬ್ರವರಿ 22, 24 ಹಾಗೂ 26ರಂದು ಮೂರು ವಿಮಾನಗಳು ಹಾರಾಟ ನಡೆಸಲಿವೆ. ದೆಹಲಿಯಿಂದ ಬೋಯಿಂಗ್ ಡ್ರೀಮ್ ‌ಲೈನರ್ ಎಐ-1947 ವಿಮಾನವು ಟೇಕ್ ಆಫ್ ಆಗಿದೆ. ಇದು 200 ಪ್ರಯಾಣಿಕರಿಗೆ ಆಸನ ವ್ಯವಸ್ಥೆಯನ್ನು ಹೊಂದಿದೆ ಎಂದು ಏರ್​ ಇಂಡಿಯಾ ಅಧಿಕೃತ ಮಾಹಿತಿ ನೀಡಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...