ಉಕ್ರೇನ್ ರಾಜಧಾನಿ ಕೀವ್ ನ ಹೊರಭಾಗದಲ್ಲಿ ನಡೆದ ವಿಮಾನ ದುರಂತದಲ್ಲಿ ಸಚಿವರು ಸೇರಿದಂತೆ 16 ಮಂದಿ ಸಾವನ್ನಪ್ಪಿದ್ದಾರೆ.
ಕೀವ್ ನ ಹೊರಭಾಗದಲ್ಲಿನ ಶಿಶುವಿಹಾರದ ಬಳಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಇಬ್ಬರು ಮಕ್ಕಳು ಸೇರಿದಂತೆ ಸಾವನ್ನಪ್ಪಿದ 16 ಜನರಲ್ಲಿ ಉಕ್ರೇನ್‌ನ ಆಂತರಿಕ ಮಂತ್ರಿಯೂ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ನಂತರ ಆನ್‌ಲೈನ್‌ನಲ್ಲಿ ಪ್ರಸಾರವಾದ ವೀಡಿಯೊದಲ್ಲಿ, ಬೆಂಕಿಯಿಂದ ಸುಟ್ಟುಹೋದ ಸ್ಥಳದಲ್ಲಿ ಜೋರಾಗ ಕೂಗು ಕೇಳಿಬರುತ್ತಿದೆ. ಅಪಘಾತದ ಕಾರಣದ ಬಗ್ಗೆ ತಕ್ಷಣದ ವಿವರಗಳ ಲಭ್ಯವಾಗಿಲ್ಲ.
“ಒಟ್ಟಾರೆಯಾಗಿ, ಪ್ರಸ್ತುತ 16 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ” ಎಂದು ರಾಷ್ಟ್ರೀಯ ಪೊಲೀಸ್ ಮುಖ್ಯಸ್ಥ ಇಗೊರ್ ಕ್ಲೈಮೆಂಕೊ ಹೇಳಿದರು.
ಸತ್ತವರಲ್ಲಿ ಆಂತರಿಕ ಸಚಿವ ಡೆನಿಸ್ ಮೊನಾಸ್ಟಿರ್ಸ್ಕಿ ಮತ್ತು ಅವರ ಮೊದಲ ಉಪ ಮಂತ್ರಿ ಯೆವ್ಗೆನಿ ಯೆನಿನ್ ಸೇರಿದಂತೆ ಆಂತರಿಕ ಸಚಿವಾಲಯದ ಹಲವಾರು ಉನ್ನತ ಅಧಿಕಾರಿಗಳು ಇದ್ದಾರೆ ಎಂದು ಹೇಳಿದರು. 10 ಮಕ್ಕಳು ಸೇರಿದಂತೆ 22 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ಸಮಯದಲ್ಲಿ ಮಕ್ಕಳು ಮತ್ತು ನೌಕರರು ಶಿಶುವಿಹಾರದಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಷ್ಯಾದೊಂದಿಗಿನ ಯುದ್ಧದ ವೇಳೆ ಹೆಲಿಕಾಪ್ಟರ್ ಪತನದ ಕಾರಣ ನಿಗೂಢವಾಗಿದೆ.
https://twitter.com/AZgeopolitics/status/1615618506665652225?ref_src=twsrc%5Etfw%7Ctwcamp%5Etweetembed%7Ctwterm%5E1615620708226461696%7Ctwgr%5Eb8a538f0a6526ed555a3b92f2c80085f8ba9f6de%7Ctwcon%5Es2_&ref_url=https%3A%2F%2Fwww.ndtv.com%2Fworld-news%2F16-dead-including-two-children-after-helicopter-crashes-near-kindergarten-outside-kyiv-news-agency-afp-quoting-police-3702436