alex Certify BIG NEWS: ಉಕ್ರೇನ್​ ಮೇಲೆ ರಷ್ಯಾ ಯುದ್ಧ ನನ್ನ ಅಧಿಕಾರಾವಧಿಯ ದುಃಖದ ಕ್ಷಣವೆಂದ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಉಕ್ರೇನ್​ ಮೇಲೆ ರಷ್ಯಾ ಯುದ್ಧ ನನ್ನ ಅಧಿಕಾರಾವಧಿಯ ದುಃಖದ ಕ್ಷಣವೆಂದ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ

ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್​ ಆಂಟೋನಿಯೋ ಗುಟೆರಸ್​ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಉಕ್ರೇನ್​​​ನಲ್ಲಿ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ‘ನನ್ನ ಅಧಿಕಾರಾವಧಿಯ ದುಃಖದ ಕ್ಷಣ’ ಎಂದು ವ್ಯಾಖ್ಯಾನಿಸಿದ್ದಾರೆ.

ಇತ್ತ ಭದ್ರತಾ ಮಂಡಳಿಯ ಸದಸ್ಯರು ನ್ಯಾಯಸಮ್ಮತವಲ್ಲದ ಹಾಗೂ ಪ್ರಚೋದನಕಾರಿ ಕ್ರಮವನ್ನು ಕೈಗೊಂಡು ವಿಶ್ವಕ್ಕೆ ಯುದ್ಧದ ಸಂದೇಶ ಸಾರಿದ ರಷ್ಯಾ ಅಧ್ಯಕ್ಷರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ವ್ಲಾಡಿಮಿರ್​ ಪುಟಿನ್​ ಇಂದು ಬೆಳಗ್ಗೆ ಪೂರ್ವ ಉಕ್ರೇನ್​ನಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಘೋಷಿಸಿದ್ದಾರೆ. ಅಲ್ಲದೇ ಈ ಮಿಲಿಟರಿ ಕಾರ್ಯಾಚರಣೆಯು ಉಕ್ರೇನ್​ನ ನಾಗರಿಕರನ್ನು ಗುರಿಯಾಗಿಸುವುದಿಲ್ಲ ಎಂದು ಹೇಳಿದ್ದರು.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ನನ್ನ ಅಧಿಕಾರಾವಧಿಯಲ್ಲಿ ಇದೊಂದು ಅತ್ಯಂತ ದುಃಖದ ಕ್ಷಣವಾಗಿದೆ. ಭದ್ರತಾ ಮಂಡಳಿಯ ಈ ಸಭೆಯಲ್ಲಿ ನಾನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ರನ್ನು ಉದ್ದೇಶಿಸಿ ನನ್ನ ಭಾರವಾದ ಹೃದಯದಿಂದ ಈ ಮಾತನ್ನು ಹೇಳುತ್ತಿದ್ದೇನೆ. ಉಕ್ರೇನ್​ನಲ್ಲಿ ಈಗಾಗಲೇ ಹಲವಾರು ಜನರು ಸಾವನ್ನಪ್ಪಿದ್ದಾರೆ. ಈಗಲೇ ನಿಮ್ಮ ಸೈನ್ಯಕ್ಕೆ ಈ ಆಕ್ರಮಣದಿಂದ ಹಿಂದೆ ಸರಿಯುವಂತೆ ಹೇಳಿ. ಉಕ್ರೇನ್​ನಲ್ಲಿ ಶಾಂತಿಗೆ ಅವಕಾಶ ನೀಡಿ ಎಂದು ಗುಟೆರಸ್​ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...