alex Certify BIG NEWS: ಈಜಲು ಹೋದ 3 ವಿದ್ಯಾರ್ಥಿಗಳು ನೀರುಪಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಈಜಲು ಹೋದ 3 ವಿದ್ಯಾರ್ಥಿಗಳು ನೀರುಪಾಲು

ಹೊಸಪೇಟೆ: ಕಾಲುವೆಯಲ್ಲಿ ಈಜಲು ಹೋಗಿದ್ದ 6 ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ನೀರು ಪಾಲಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ಹೊರವಲಯದ ಹೆಚ್ ಎಂ ಟಿ ಕಾಲುವೆಯಲ್ಲಿ ನಡೆದಿದೆ.

ಯಶವಂತ್, ಅಂಜಿನಿ, ಗುರುರಾಜ್ ಮೃತ ವಿದ್ಯಾರ್ಥಿಗಳು. ಹೊಸಪೇಟೆಯ ವಿಜಯನಗರ ಪಿಯು ಕಾಲೇಜಿನ 6 ವಿದ್ಯಾರ್ಥಿಗಳು ಈಜಲೆಂದು ಕಾಲುವೆಗೆ ಹೋಗಿದ್ದರು. ಈಜಲು ಇಳಿದಿದ್ದ ವಿದ್ಯಾರ್ಥಿಗಳಲ್ಲಿ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಉಳಿದ ಮೂವರು ಈಜಿ ದಡ ಸೇರಿದ್ದಾರೆ.

ಹೊಸಪೇಟೆ ಗ್ರಾಮೀಣ ಠಾಣೆ ಪೊಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...