ಇವಿಎಂ ಟ್ಯಾಂಪರಿಂಗ್ ಆರೋಪ ತಳ್ಳಿ ಹಾಕಿರುವ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ, ಯಾವುದೇ ಇವಿಎಂ ಮಷಿನ್ಗಳನ್ನು ಸ್ಟ್ರಾಂಗ್ ರೂಮ್ನಿಂದ ಹೊರ ತೆಗೆಯುವಂತಿಲ್ಲ ಎಂದು ಹೇಳಿದ್ದಾರೆ. ಇವಿಎಂಗಳ ಚಲನೆಯ ಬಗ್ಗೆ ರಾಜಕೀಯ ಪಕ್ಷಗಳಿಗೆ ಮೊದಲೇ ಮಾಹಿತಿ ನೀಡಿರುವುದು ವಾರಣಾಸಿ ಎಡಿಎಂ ಮಾಡಿದ ತಪ್ಪಾಗಿದೆ ಎಂದು ಹೇಳಿದರು.
ವಾರಣಾಸಿಯಲ್ಲಿ ಇವಿಎಂಗಳನ್ನು ಸಾಗಿಸಲಾಗುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋಪ ಮಾಡಿರುವ ಬೆನ್ನಲ್ಲೇ ಸುಶೀಲ್ ಚಂದ್ರ ಈ ಹೇಳಿಕೆ ನೀಡಿದ್ದಾರೆ. ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸ್ಥಳೀಯ ಅಭ್ಯರ್ಥಿಗಳ ಯಾವುದೇ ಮಾಹಿತಿ ನೀಡದೇ ಇವಿಎಂಗಳನ್ನು ಸಾಗಿಸುತ್ತಿದ್ದಾರೆ ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದರು. ಅಲ್ಲದೆ ಈ ಬಗ್ಗೆ ಚುನಾವಣಾ ಆಯೋಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು.
ಇವಿಎಂ ಟ್ಯಾಂಪರಿಂಗ್ ಮಾಡುವ ಪ್ರಶ್ನೆಯೇ ಇಲ್ಲ. ಇವಿಎಂಗಳನ್ನು ನಿರಂತರವಾಗಿ 2004ರಿಂದ ಬಳಸಲಾಗುತ್ತಿದೆ. 2019ರಲ್ಲಿ ನಾವು ಪ್ರತಿ ಮತಗಟ್ಟೆಗಳಲ್ಲಿ ವಿವಿಪ್ಯಾಟ್ಗಳನ್ನು ಬಳಸುತ್ತಿದ್ದೇವೆ. ರಾಜಕೀಯ ಪಕ್ಷದ ಏಜೆಂಟರ ಸಮ್ಮುಖದಲ್ಲಿ ಇವಿಎಂಗಳನ್ನು ಸೀಲ್ ಮಾಡಲಾಗಿದೆ ಎಂದು ಸುಶೀಲ್ ಚಂದ್ರ ಹೇಳಿದ್ದಾರೆ.