ಚಿಕ್ಕಮಗಳೂರು: ಇತ್ತೀಚೆಗೆ ಕಾಂಗ್ರೆಸ್ ಗೆ ಸೇರ್ಪಡೆಯಾಗಿರುವ ಕನ್ಹಯ್ಯ ಕುಮಾರ್ ಬಿಜೆಪಿ ವಿರುದ್ಧ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಕಿಡಿಕಾರಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಇವರ ತಾತ-ಮುತ್ತಾತ ಹೀಗೆ ಹೇಳಿ ಕಳೆದು ಹೋಗಿದ್ದಾರೆ, ಅವರ ಸಮಾಧಿ ಮಣ್ಣಿನ ಮೇಲೆ ಸಂಘ, ಬಿಜೆಪಿ ಬಲವಾಗಿದೆ ಎಂದು ಆಕ್ರೋಶ ವ್ಯಕಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಕನ್ಹಯ್ಯ ಕುಮಾರ್ ತುಕ್ಡೆ ಗ್ಯಾಂಗ್ ನ ನಾಯಕ. ಬಿಜೆಪಿ ವಿರುದ್ಧ ಮಾತನಾಡಿ ಇವರ ತಾತ-ಮುತ್ತಾತ ಕಳೆದು ಹೋದರು. ತುಕ್ಡೆ ಗ್ಯಾಂಗ್ ನವರಿಗೆ ಗತಿ ಇರಲಿಲ್ಲ, ಚುನಾವಣೆಯಲ್ಲಿ ಸೋತರು. ಹೀಗಾಗಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಿರ್ಣಾಯಕವಾಗಿದ್ದರೆ ಮಾತ್ರವೇ ಡಿಎನ್ಎ ಪರೀಕ್ಷೆ: ಸುಪ್ರೀಂಕೋರ್ಟ್ ಮಹತ್ವದ ಸೂಚನೆ
ಕಾಂಗ್ರೆಸ್ ನಲ್ಲಿರೋದು ವಂಶಪಾರಂಪರ್ಯ ಮತ್ತು ಪರಿವಾರವಾದ. ಪರಿವಾರವಾದ ಬಂದರೆ ಅಲ್ಲಿ ಮಾಲೀಕತ್ವ ಬರುತ್ತೆ. ಅಲ್ಲಿ ಮಾಲೀಕರು, ನೌಕರರು, ಗುಲಾಮರು ಇರುತ್ತಾರೆ. ಈಗ ಕನ್ಹಯ್ಯ ಕುಮಾರ್ ನಂತಹ ಹಲವರು ಕಾಂಗ್ರೆಸ್ ಗೆ ಸೇರಿದ್ದಾರೆ. ಕನ್ಹಯ್ಯ ಕುಮಾರ್ ನಂತವರು ಬಹಳ ಮಾತನಾಡಿ, ಮಣ್ಣಾಗಿದ್ದಾರೆ ಎಂದು ಪರೋಕ್ಷ ಎಚ್ಚರಿಕೆ ನೀಡಿದರು.
ಖಾಸಗಿ ಸುದ್ದಿವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ಕನ್ಹಯ್ಯ ಕುಮಾರ್, ಐ ವಿಲ್ ಡೂ ತುಕ್ಡೆ ತುಕ್ಡೆ ಆಫ್ ಬಿಜೆಪಿ ಎಂದು ಹೇಳಿಕೆ ನೀಡಿದ್ದರು. ಕನ್ಹಯ್ಯ ಹೇಳಿಕೆಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.