ಕಲಬುರ್ಗಿ: ವ್ಯಕ್ತಿಯೋರ್ವ ತನ್ನ ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರ್ಗಿ ಜಿಲ್ಲೆಯ ಆಳಂದ ಬಸ್ ಡಿಪೋ ಬಳಿ ನಡೆದಿದೆ.
ಸಿದ್ದು ಮಹಾಮಲ್ಲಪ್ಪ (35) ಹಾಗೂ ಮಕ್ಕಳಾದ ಶ್ರೇಯಾ (11), ಮನೀಶ್ (12) ಮೃತರು. ಆಳಂದ ನಗರದ ಶರಣನಗರ ನಿವಾಸಿಗಳಾಗಿದ್ದಾರೆ.
ತಂದೆ ಹಾಗೂ ಮಕ್ಕಳಿಬ್ಬರೂ ಜೀವನದಲ್ಲಿ ಜಿಗುಪ್ಸೆಗೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅಗ್ನಿಶಾಮಕ ಸಿಬ್ಬಂದಿಗಳು ಬಾವಿಯಿಂದ ಮಕ್ಕಳಿಬ್ಬರ ಮೃತದೇಹ ಮೇಲಕೆತ್ತಿದ್ದಾರೆ. ತಂದೆ ಸಿದ್ದು ಮಹಾಮಲ್ಲಪ್ಪನ ಶವಕ್ಕಾಗಿ ಶೋಧ ನಡೆಸಲಾಗುತ್ತಿದೆ.