alex Certify BIG NEWS: ಇನ್ಮೇಲೆ ಸಾವಿಗೂ ಸಿಗಬಹುದು ‘ಚಿಕಿತ್ಸೆ’….! ಸತ್ತ ಹಂದಿಯ ಜೀವಕೋಶ, ಅಂಗಗಳನ್ನು ಪುನಃಸ್ಥಾಪಿಸಿದ್ದಾರೆ ವಿಜ್ಞಾನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಇನ್ಮೇಲೆ ಸಾವಿಗೂ ಸಿಗಬಹುದು ‘ಚಿಕಿತ್ಸೆ’….! ಸತ್ತ ಹಂದಿಯ ಜೀವಕೋಶ, ಅಂಗಗಳನ್ನು ಪುನಃಸ್ಥಾಪಿಸಿದ್ದಾರೆ ವಿಜ್ಞಾನಿಗಳು

ಹುಟ್ಟು ಮತ್ತು ಸಾವು ಇವೆರಡೂ ಸೃಷ್ಟಿಕರ್ತನ ಮಾಯೆ ಅನ್ನೋ ಮಾತಿದೆ. ಆದ್ರೀಗ ವಿಜ್ಞಾನಿಗಳು ಸಾವಿಗೂ ಚಿಕಿತ್ಸೆ ಕಂಡುಹಿಡಿಯುವ ಪ್ರಯತ್ನದಲ್ಲಿದ್ದಾರೆ. ವಿಜ್ಞಾನಿಗಳ ತಂಡ ಸತ್ತ ಹಂದಿಗಳ ರಕ್ತದ ಹರಿವನ್ನು ಪುನಃಸ್ಥಾಪಿಸಿದೆ. ಕೆಲವು ಅಂಗಗಳಲ್ಲಿ ಜೀವಕೋಶದ ಕಾರ್ಯವನ್ನು ಪುನಃಸ್ಥಾಪಿಸುವಲ್ಲಿ ಯಶಸ್ವಿಯಾಗಿದೆ.

ನೇಚರ್ ಸೈನ್ಸ್‌ ಜರ್ನಲ್‌ನಲ್ಲಿ ಈ ಅಧ್ಯಯನ ಪ್ರಕಟವಾಗಿದೆ. ಯೇಲ್ ವಿಶ್ವವಿದ್ಯಾಲಯದ ಸಂಶೋಧಕರು, ಸತ್ತ ಜೀವಕೋಶಗಳನ್ನು ಪುನಃಸ್ಥಾಪಿಸಲು ತಂತ್ರಜ್ಞಾನವನ್ನು ಬಳಸಿದ್ದಾರೆ. ಕಸಿ ಮಾಡಲು ಮಾನವ ಅಂಗಗಳ ಸಂಗ್ರಹಣೆಗೆ ಹೊಸ ಸಾಧ್ಯತೆಗಳನ್ನು, ಆಶಾಭಾವವನ್ನು ವಿಜ್ಞಾನಿಗಳು ಮೂಡಿಸಿದ್ದಾರೆ. ಸತ್ತವರನ್ನೂ ಬದುಕಿಸುವ ಕಡೆಗೆ ಈ ಅಧ್ಯಯನವು ಒಂದು ಮೈಲಿಗಲ್ಲು ಎಂದು ಹೇಳಲಾಗುತ್ತಿದೆ.

ಸಂಶೋಧಕರು ಬಳಸಿದ ತಂತ್ರಜ್ಞಾನ ಸಾವಿನ ನಂತರ ಅಂಗಗಳು ಹೆಚ್ಚು ಕಾಲ ಉಳಿಯಲು ಸಹಾಯ ಮಾಡುತ್ತದೆ. ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಇದು ವರದಾನವಾಗಬಹುದು. ಯೇಲ್ ಸ್ಕೂಲ್ ಆಫ್ ಮೆಡಿಸಿನ್‌ನ ನರವಿಜ್ಞಾನ ಸಹಾಯಕ ಸಂಶೋಧನಾ ವಿಜ್ಞಾನಿ ಡೇವಿಡ್ ಆಂಡ್ರಿಜೆವಿಕ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಎಲ್ಲಾ ಜೀವಕೋಶಗಳು ತಕ್ಷಣವೇ ಸಾಯುವುದಿಲ್ಲ, ಕೆಲವು ಸೆಲ್ಯುಲಾರ್ ಕಾರ್ಯವನ್ನು ಮರುಸ್ಥಾಪಿಸಬಹುದು ಎಂದವರು ಹೇಳಿದ್ದಾರೆ.

2019 ರಲ್ಲಿ ಅಮೆರಿಕ ಮೂಲದ ವಿಜ್ಞಾನಿಗಳ ತಂಡ ಹಂದಿಗಳ ಶಿರಚ್ಛೇದ ಮಾಡಿದ ಗಂಟೆಗಳ ನಂತರ ಮೆದುಳಿನಲ್ಲಿ ಜೀವಕೋಶದ ಕಾರ್ಯವನ್ನು ಪುನಃಸ್ಥಾಪಿಸಲು ಪ್ರಯತ್ನಿಸಿತ್ತು. ಈ ಅಧ್ಯಯನದಲ್ಲಿ ಕೂಡ ಸಂಶೋಧಕರು ಅದೇ ತಂತ್ರವನ್ನು ಬಳಸಿದ್ದಾರೆ. ಅದನ್ನು ಇಡೀ ದೇಹಕ್ಕೆ ವಿಸ್ತರಿಸಿದ್ದಾರೆ. ಅಧ್ಯಯನವನ್ನು ನಡೆಸಲು ಅವರು ಅರಿವಳಿಕೆ ನೀಡಿ ಹಂದಿಗಳಲ್ಲಿ ಹೃದಯಾಘಾತವನ್ನು ಉಂಟುಮಾಡಿದರು.

ದೇಹಗಳ ಮೂಲಕ ರಕ್ತ  ಹರಿಯುವುದು ನಿಂತಾಗ ಸಂಶೋಧನೆ ಮುಂದುವರಿಸಿದ್ದಾರೆ. ಜೀವಕೋಶಗಳನ್ನು ರಕ್ಷಿಸುವ ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುವ ಔಷಧಗಳನ್ನು ಸತ್ತ ಹಂದಿಗಳ ದೇಹಕ್ಕೆ ಪಂಪ್ ಮಾಡಲಾಯಿತು. ಇದರಿಂದಾಗಿ ರಕ್ತವು ಮತ್ತೆ ಪರಿಚಲನೆಯನ್ನು ಪ್ರಾರಂಭಿಸಿತು ಮತ್ತು ಪ್ರಯೋಗದ ಮುಂದಿನ ಆರು ಗಂಟೆಗಳ ಕಾಲ ಹೃದಯ, ಯಕೃತ್ತು ಮತ್ತು ಮೂತ್ರಪಿಂಡದಂತಹ ಪ್ರಮುಖ ಅಂಗಗಳಲ್ಲಿ ಅನೇಕ ಜೀವಕೋಶಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿದವು. ಜೀವಕೋಶಗಳ ನಾಶವನ್ನು ನಿಲ್ಲಿಸಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಹಾಗಾಗಿ ಸಾವಿಗೂ ಚಿಕಿತ್ಸೆ ಸಿಗಬಹುದು ಅನ್ನೋ ಆಶಾಭಾವ ಮೂಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...