ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಬ್ಲಾಸ್ಟ್ ಆಗಿ ಪ್ರಾಣಕ್ಕೂ ಕುತ್ತು ತರುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಇದೀಗ ವಕೀಲರೊಬ್ಬರ ಜೇಬಿನಲ್ಲಿದ್ದ ಸ್ಮಾರ್ಟ್ ಫೋನ್ ಇದ್ದಕ್ಕಿದ್ದಂತೆ ಸ್ಫೋಟಗೊಂಡು ಕೋರ್ಟ್ ನಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ ಘಟನೆ ನವದೆಹಲಿಯಲ್ಲಿ ನಡೆದಿದೆ.
ವಕೀಲ ಗೌರವ್ ಗುಲಾಟಿ ಅವರ ಜೇಬಿನಲ್ಲಿದ್ದ ಮೊಬೈಲ್, ಕೋರ್ಟ್ ಆವರಣದಲ್ಲಿ ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಗಿದೆ. ಬ್ಲಾಸ್ಟ್ ಆದ ಮೊಬೈಲ್ ಫೋನ್ ಫೋಟೋಗಳನ್ನು ಸ್ವತಃ ವಕೀಲರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಎಚ್ಚರ…..! ನಿದ್ರೆ ಮಾಡುವಾಗ ಬಾಯಿಯಲ್ಲಿ ಉಸಿರಾಡ್ತಿರಾ……?
ಮೊಬೈಲ್ ಸ್ಫೋಟದ ಸಂದರ್ಭದಲ್ಲಿ ನಾನು ಫೋನ್ ಬಳಸಿರಲಿಲ್ಲ. ಶೇ.90ರಷ್ಟು ಚಾರ್ಜ್ ಕೂಡ ಇತ್ತು. ಒನ್ ಪ್ಲಸ್ ಕಂಪನಿಯ ನಾರ್ಡ್-2 ಫೋನ್ ಇದಾಗಿದ್ದು, ಮೊದಲಿಗೆ ಫೋನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೆಲ ಸೆಕೆಂಡುಗಳಲ್ಲೇ ಮೊಬೈಲ್ ಸ್ಫೋಟಗೊಂಡಿದೆ. ನನಗೂ ಸಣ್ಣಪುಟ್ಟಗಾಯಗಳಾಗಿವೆ ಎಂದು ತಿಳಿಸಿದ್ದಾರೆ.
ಅಲ್ಲದೇ ಒನ್ ಪ್ಲಸ್ ಕಂಪನಿ ನಿಷೇಧಿಸುವ ನಿಟ್ಟಿನಲ್ಲಿ ಕೋರ್ಟ್ ಗೆ ಅರ್ಜಿ ಸಲ್ಲಿಸುತ್ತಿದ್ದು, ಕಾನೂನು ಹೋರಾಟ ಮಾಡುವುದಾಗಿ ಗೌರವ್ ತಿಳಿಸಿದ್ದಾರೆ.