ಬೆಂಗಳೂರು: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ತಾರಕಕ್ಕೇರಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಹಿಜಾಬ್ ವಿಚಾರ ಬಹಿರಂಗವಾಗಿ ಯಾರೂ ಕೂಡ ಚರ್ಚಿಸಬಾರದು ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್ ಮಧ್ಯಪ್ರವೇಶಿಸಿದೆ. ಈ ವಿಚಾರ ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿರುವಾಗ ಪಕ್ಷದ ಅಧ್ಯಕ್ಷನಾಗಿ ನಾನು ನನ್ನ ಅಭಿಪ್ರಾಯವನ್ನು ಬಹಿರಂಗವಾಗಿ ಹೇರುವುದು ಸರಿಯಲ್ಲ. ಹಿಜಾಬ್ ಅವರ ಮೂಲಭೂತ ಹಕ್ಕು, ಜೀವನ ಸಂಸ್ಕೃತಿ ವಿಚಾರ. ಈ ಬಗ್ಗೆ ಯಾರೂ ಕೂಡ ಬಹಿರಂಗವಾಗಿ ಚರ್ಚಿಸುವುದು ಸೂಕ್ತವಲ್ಲ ಎಂದರು.
ಕೋಟ್ಯಾಂತರ ರೂ. ಆಸ್ತಿಯ ಒಡತಿ ಶಿಲ್ಪಾ ಶೆಟ್ಟಿ…! ಪತ್ನಿ ಹೆಸರಿಗೆ 38.5 ಕೋಟಿ ಮೌಲ್ಯದ ಪ್ಲಾಟ್ ಗಳನ್ನ ವರ್ಗಾವಣೆ ಮಾಡಿದ ರಾಜ್ ಕುಂದ್ರಾ
ಹಿಜಾಬ್, ಕೇಸರಿ ಶಾಲು ಇದೆಲ್ಲ ತುಂಬಾ ಸೂಕ್ಷ್ಮವಾದ ವಿಚಾರ. ಇದು ಬಹಿರಂಗ ಚರ್ಚೆ ವಿಷಯವಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಹಿಜಾಬ್ ವಿಚಾರ ವಿದ್ಯಾರ್ಥಿಗಳು, ಮಕ್ಕಳ ವಿಚಾರ, ಅವರವರ ಪದ್ಧತಿ, ಆಚಾರ-ವಿಚಾರಕ್ಕೆ ಸಂಬಂಧಿಸಿದ್ದು, ವಿಷಯ ಕೋರ್ಟ್ ನಲ್ಲಿರುವುದರಿಂದ ಯಾವುದೇ ಚರ್ಚೆಗೆ ಆಸ್ಪದ ಬೇಡ ಎಂದರು.