ಬೆಂಗಳೂರು: ನಾನು ಆರ್.ಎಸ್.ಎಸ್. ನ ಯಾವುದೇ ಬೈಟಕ್ ಕೂತಿಲ್ಲ, ಸಂಘ ಪರಿವಾರವನ್ನು ಹೊಗಳಿಯೂ ಇಲ್ಲ. ಯಾರ್ಯಾರು ಏನು ಮಾಡುತ್ತಿದ್ದಾರೆ ಎಲ್ಲವೂ ಗೊತ್ತಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದ್ದಾರೆ.
ಆರ್.ಎಸ್.ಎಸ್. ನ್ನು ಸ್ವತಃ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರೇ ಹೊಗಳಿದ್ದರು. ಆರ್.ಎಸ್.ಎಸ್. ಬಗ್ಗೆ ಆರೋಪ ಮಾಡುವ ಮೊದಲು ಕುಮಾರಸ್ವಾಮಿಯವರು ದೇವೇಗೌಡರನ್ನು ಕೇಳಿ ತಿಳಿದುಕೊಳ್ಳಬಹುದಿತ್ತು ಎಂದು ಬಿ.ವೈ.ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿರುವ ದೇವೇಗೌಡರು, ನನಗೂ ಆರ್.ಎಸ್.ಎಸ್. ಗೂ ಏನು ಸಂಬಂಧ? ಆರ್.ಎಸ್.ಎಸ್. ಬಗ್ಗೆ ಗಂಧ ಗಾಳಿ ಗೊತ್ತಿಲ್ಲ. ನಾನು ಆರ್.ಎಸ್.ಎಸ್. ಹೊಗಳಿದ್ದೇನೆ ಎಂಬುದು ಶುದ್ಧ ಸುಳ್ಳು ಎಂದು ಹೇಳಿದ್ದಾರೆ.
BREAKING: ಮಾರಿಯಾ ರೆಸ್ಸಾ ಹಾಗೂ ಡಿಮಿಟ್ರಿ ಮುರಾಟೋವ್ಗೆ ‘ನೊಬೆಲ್’ ಶಾಂತಿ ಪ್ರಶಸ್ತಿ
ಬಿಜೆಪಿ ಹಿರಿಯ ನಾಯಕರಾದ ಅಡ್ವಾಣಿ ಬಂದಾಗ ಕೆಲ ಸಮಯ ಮಾತುಕತೆ ನಡೆಸಿದ್ದೆವು, ತುರ್ತು ಪರಿಸ್ಥಿತಿ ಸಮಯದಲ್ಲಿ ಜೈಲಿಗೆ ಹೋಗಿದ್ದರ ಬಗ್ಗೆ ಚರ್ಚಿಸಿದ್ದೆವು. ನಾನು ಯಾವ ಸಂಘ ಪರಿವಾರವನ್ನೂ ಹೊಗಳಿಲ್ಲ ಎಂದು ಹೇಳಿದರು.
ಇದೇ ವೇಳೆ ಅಲ್ಪಸಂಖ್ಯಾತರಿಗೆ ಜೆಡಿಎಸ್ ಟಿಕೆಟ್ ವಿಚಾರವಾಗಿ ಸಿದ್ದರಾಮಯ್ಯ ಹೇಳಿಕೆಗೆ ಕಿಡಿಕಾರಿದ ದೇವೇಗೌಡರು, ನೆಹರು ಕಾಲದಿಂದಲೂ ಯಾವ ಯಾವ ರಾಜ್ಯದಲ್ಲಿ ಕಾಂಗ್ರೆಸ್ ಎಲ್ಲೆಲ್ಲಿಗೆ ಬಂದಿದೆ ಎಂದು ಗೊತ್ತಿರುವ ವಿಚಾರ. ಉಪಚುನಾವಣೆಯಲ್ಲಿ ಬಿಜೆಪಿಗೆ ಸಹಾಯವಾಗಲಿ ಎಂಬ ಉದ್ದೇಶಕ್ಕೆ ನಾವು ಮುಸ್ಲಿಂ ಅಭ್ಯರ್ಥಿ ಹಾಕಿಲ್ಲ. ನಮ್ಮ ಪಕ್ಷದ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ನಾನು ಬೆಳೆಸಿದ ಮುಸ್ಲೀಂ ಮುಖಂಡ ಈಗ ಕೈ ನಾಯಕರ ಬಲಗೈ ಶಕ್ತಿ. ಇರಲಿ..ಎಂ.ಸಿ.ಮುನಗೋಳಿ ನಿಧನದ ಬಳಿಕ ಅವರ ಮಗ ಅಶೋಕ್ ಮುನಗೋಳಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆದೊಯ್ದರು ನಮ್ಮ ಅಭ್ಯರ್ಥಿ ಹೊತ್ತೊಯ್ದರೆ ಸುಮ್ಮನಿರಬೇಕಾ? ನಿಮಗೆ ನಿಮ್ಮ ಅಭ್ಯರ್ಥಿ ಹೇಗೆ ಮುಖ್ಯವೋ ನಮಗೂ ಹಾಗೆ. ನನ್ನನ್ನು ಕೆಣಕಲು ಬರಬೇಡಿ ಕೆಣಕಿದರೆ ಸರಿಯಿರಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದರು.