ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಿದ್ದರಾಮಯ್ಯ ಓರ್ವ ಮತೀಯವಾದಿ ಎಂದು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಅವರ ಮನಸ್ಥಿತಿ ತಾಲಿಬಾನಿಗಳಿಗಿಂತ ಕಡಿಮೆಯಿಲ್ಲ. ಕೇಸರಿ ಪೇಟ ನೋಡಿದ್ರೆ ಉರಿದು ಬೀಳ್ತಾರೆ, ಕುಂಕುಮ ಕಂಡ್ರೆ ಹೆದರಿಕೆಯಾಗುತ್ತೆ ಎಂದು ಹೇಳ್ತಾರೆ. ಇದನ್ನೆಲ್ಲ ಸಿದ್ದರಾಮಯ್ಯ ತಂದೆ ನೋಡಿದ್ರೆ ಸಿದ್ದರಾಮಯ್ಯ ಎಂದು ಅವರಿಗೆ ಹೆಸರಿಡುತ್ತಿರಲಿಲ್ಲ ಎಂದು ಹೇಳಿದ್ದಾರೆ.
ವಿಶ್ವದಲ್ಲಿ ಎಲ್ಲಿಯೂ ಕುಂಕುಮದಿಂದ ಭಯೋತ್ಪಾದನೆ ನಡೆದಿಲ್ಲ. ಸ್ಕಲ್ ಟೋಪಿಯ ಜನ ತಮ್ಮವರನ್ನು ಕೊಂದಿದ್ದಾರೆ ಎಂಬುದನ್ನು ಗಮನಿಸಬೇಕು ಎಂದು ಸಿದ್ದರಾಮಯ್ಯ ವಿರುದ್ಧ ಸಿ.ಟಿ. ರವಿ ಗುಡುಗಿದ್ದಾರೆ.