ಮೈಸೂರು: ರಾಜ್ಯದ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಸೇರಿಸುವ ವಿಚಾರವಾಗಿ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ನಾವು ಸಹ ಹಿಂದೂಗಳೇ, ಇಡೀ ದೇಶದ ಜನತೆಗೆ ದೂರದರ್ಶನದ ಮೂಲಕ ಭಗವದ್ಗೀತೆ ತಲುಪಿಸಿದ್ದು ಕಾಂಗ್ರೆಸ್ ಎಂದು ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ರಾಜೀವ್ ಗಾಂಧಿ ರಾಮಾಯಣ, ಮಹಾಭಾರತವನ್ನು ದೇಶದ ಜನತೆ ತೋರಿಸಿದ್ದಾರೆ. ದೂರದರ್ಶನದ ಮೂಲಕ ಜನರಿಗೆ ಭಗವದ್ಗೀತೆ ತಲುಪುವಂತೆ ಮಾಡಿದರು ಎಂದು ಹೇಳಿದರು.
ನಾವು ಕೂಡ ಹಿಂದೂಗಳೇ, ಭಗವದ್ಗೀತೆ ಶಿಕ್ಷಣದಲ್ಲಿ ಅಷ್ಟೇ ಅಲ್ಲ, ಇಡೀ ದೇಶದ ಜನತೆಗೆ ತಲುಪುವಂತೆ ಮಾಡಿದ್ದು ಕಾಂಗ್ರೆಸ್. ಯದಾ ಯದಾಹಿ ಧರ್ಮಸ್ಯ…….ಶ್ಲೋಕ ಹೇಳುವ ಮೂಲಕ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
’ಮುಂದೊಂದು ದಿನ ಕೇಸರಿ ಧ್ವಜವೇ ರಾಷ್ಟ್ರಧ್ವಜವಾಗಲಿದೆ’ ಎಂಬ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಕಲ್ಲಡ್ಕ ಪ್ರಭಾಕರ ಭಟ್ ಬಿಜೆಪಿಯಲ್ಲಿ ಯಾರು ? ಏನು ಅಂತ ಗೊತ್ತಿಲ್ಲ. ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದ್ದಾರೆ.