ಚಿಕ್ಕಬಳ್ಳಾಪುರ: ಕಾಂಗ್ರೆಸ್ ನಾಯಕರ ಪೇಸಿಎಂ ಪೋಸ್ಟರ್ ಅಭಿಯಾನದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆಗೆ ತಿರುಗೇಟು ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಇಂತಹ ಬೆದರಿಕೆಗಳಿಗೆಲ್ಲ ನಾವು ಹೆದರಲ್ಲ, ನಾನು ಕಾನೂನು ಓದಿದ್ದೇನೆ, ಲಾ ನಮಗೂ ಗೊತ್ತು ಎಂದು ಟಾಂಗ್ ನೀಡಿದ್ದಾರೆ.
ಪೇಸಿಎಂ ಪೋಸ್ಟರ್ ಅಭಿಯಾನ ನಡೆಸಿದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಪೇಸಿಎಂ ಅಭಿಯಾನದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಗದು. ಕಾನೂನು ಕ್ರಮಕ್ಕೆ ಮುಂದಾದ್ರೆ ನಾವೇನು ಸುಮ್ಮನೇ ಇರ್ತೀವಾ? ನಾನು ಲಾ ಓದಿದ್ದೇನೆ. ಸಿಎಂ ಓದಿಲ್ಲ. ಹಾಗಾಗಿ ಅವರಿಗೆ ಗೊತ್ತಿಲ್ಲ ಎಂದು ಹೇಳಿದರು.
ಪ್ರತಿಭಟನೆ, ಚಳುವಳಿ ಸ್ವಾತಂತ್ರ್ಯವನ್ನು ಹಾಗೆಲ್ಲ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಪ್ರತಿಭಟನೆ ನಮ್ಮ ಹಕ್ಕು. ನಾವು ನ್ಯಾಯಯುತವಾಗಿ ಹೋರಾಡುತ್ತಿದ್ದೆವೆ. ಕಾನೂನು ಕ್ರಮಕ್ಕೆ ಮುಂದಾದ್ರೆ ನಾವೇನು ಸುಮ್ಮನಿರುತೀವಾ? ಎಂದು ಗರಂ ಆದರು.