ಮಂಡ್ಯ: ಸಂಸದೆ ಸುಮಲತಾ ಹಾಗೂ ಜೆಡಿಎಸ್ ಶಾಸಕರ ಜಟಾಪಟಿ ತಾರಕ್ಕೇರಿದ್ದು, ಮಂಡ್ಯ ರಾಜಕಾರಣ ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುತ್ತಿದೆ. ಕೆ ಆರ್ ಎಸ್ ಬಿರುಕು ಎಂದು ಹೇಳಿ ಆತಂಕ ಮೂಡಿಸಿ, ಈಗ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಪರಿಶೀಲನೆ ನಡೆಸಿದ್ದಾರೆ ಯಾವುದೇ ಅಕ್ರಮ ಗಣಿಗಾರಿಕೆಯನ್ನೂ ನಮ್ಮ ಕ್ಷೇತ್ರಗಳಲ್ಲಿ ನಡೆಸುತ್ತಿಲ್ಲ ಸುಮಲತಾ ಅವರ ಇಂತಹ ನಾಟಕಗಳು ಬಹಳ ದಿನ ನಡೆಯಲ್ಲ ಎಂದು ಜೆಡಿಎಸ್ ಶಾಸಕ ಅನ್ನದಾನಿ ವಾಗ್ದಾಳಿ ನಡೆಸಿದ್ದಾರೆ.
ಕೆ ಆರ್ ಎಸ್ ಡ್ಯಾಮೇಜ್ ಆಗಿದೆ ಎಂದು ಎಲ್ಲರಲೂ ಆತಂಕ ಸೃಷ್ಟಿ ಮಾಡಿದರು. ಬೇಜವಾಬ್ದಾರಿ ಹೇಳಿಕೆ ನೀಡಿದರು. ಸುಮಲತಾ ಅವರು ಬಿ.ಇ. ಓದಿದ್ದೀರಾ? ಅಥವಾ ಇಂಜಿನಿಯರ್ರಾ? ನಮ್ಮ ಕಣ್ಣುಗಳಿಗೆ ಕಾಣದ ಬಿರುಕು ಇವರ ಕಣ್ಣಿಗೆ ಕಂಡಿದೆ…ಬಿರುಕು ಬಿಟ್ಟಿದ್ದರೆ ನಾವು ಹೇಳುತ್ತಿರಲಿಲ್ಲವೇ? ಕೆ ಆರ್ ಎಸ್ ಬಗ್ಗೆ, ಈ ಭಾಗದ ಜನರ ಬಗ್ಗೆ ನಮಗೆ ಕಾಳಜಿ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಹಿಮಾಚಲಪ್ರದೇಶ ಮಾಜಿ ಸಿಎಂ ವೀರಭದ್ರ ಸಿಂಗ್ ವಿಧಿವಶ
ಸಿನಿಮಾದಲ್ಲಿ ನಟಿಸಿದಂತೆ ರಾಜಕಾರಣ ಸುಲಭ ಎಂದುಕೊಂಡಿದ್ದಾರೆ. ಸಿನಿಮಾದಂತೆಯೇ ಇಲ್ಲಿಯೂ ನಟನೆ ನಡೆಯಲ್ಲ. ಸಿನಿಮಾ ತೋರಿಸಿ ಚುನಾವಣೆ ಗೆದ್ದಿದ್ದು ಅವರು ಹೊರತು ನಾವಲ್ಲ. ಇಂತಹ ಆಕ್ಟಿಂಗ್ ಇನ್ನ ಬಹಳ ದಿನ ನಡೆಯಲ್ಲ. ಮಂಡ್ಯ ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ ಮೊದಲು ಅದನ್ನು ಬಗೆಹರಿಸಲು ಗಮನ ಕೊಡಿ ಇನ್ನೂ ಎರಡು ವರ್ಷ ಅವಕಾಶವಿದೆ. ಪೂರ್ಣ ಪ್ರಮಾಣದಲ್ಲಿ ರಾಜಕಾರಣ ಮಾಡಿ ಅದನ್ನು ಬಿಟ್ಟು ಇಲ್ಲಸಲ್ಲದ ನಾಟಕ ಮಾಡುವುದಾದರೆ ರಾಜೀನಾಮೆ ಕೊಟ್ಟು ಹೋಗಿ ಎಂದು ಗುಡುಗಿದ್ದಾರೆ.