ಚಿಕ್ಕಮಗಳೂರು: ಡಿಸಿ ಕಚೇರಿಯ ಆವರಣದಲ್ಲಿ ಆಜಾನ್ ಕೂಗಿದ ವಿಚಾರವಾಗಿ ಕಿಡಿಕಾರಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ, ಇದು ಅವರ ಮಾನಸಿಕತೆಯನ್ನು ತೋರುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ.ರವಿ, ಶಿವಮೊಗ್ಗ ಡಿಸಿ ಕಚೇರಿಯಲ್ಲಿ ನಿಂತು ಯುವಕ ಆಜಾನ್ ಕೂಗಿದ್ದು ಅಲ್ಲದೇ ವಿಧಾನಸೌಧದ ಮೇಲೆ ಕೂಗುತ್ತೇವೆ ಎಂದಿರುವುದು ದಾಸ್ಯ. ಜಿನ್ನಾ, ಬಿನ್ ಲಾಡೆನ್ ಮಾನಸಿಕತೆಗಿಂತ ಇವರು ಭಿನ್ನವಾಗಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಆ ಮಾನಸಿಕತೆಗೆ ಹೇಗೆ ಸರ್ಜಿಕಲ್ ಸ್ಟ್ರೈಕ್ ಮಾಡಬೇಕು ಎಂಬುದು ಗೊತ್ತಿದೆ ಎಂದು ಗುಡುಗಿದ್ದಾರೆ.