ನವದೆಹಲಿ: ಆರ್ ಬಿ ಐ ಹಣಕಾಸು ನೀತಿ ಪ್ರಕಟವಾಗಿದ್ದು, ಈ ಬಾರಿ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿ ಮುಂದುವರೆಸಲು ನಿರ್ಧರಿಸಿದೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ ಬಿ ಐ ಗವರ್ನರ್ ಶಕ್ತಿಕಾಂತ್ ದಾಸ್, ರೆಪೋ ದರ ಶೇ.6.50ರಲ್ಲೇ ಮುಂದುವರೆಯುತ್ತದೆ. ರೆಪೋ ದರ ಏರಿಕೆಯಿಲ್ಲ ಎಂದು ತಿಳಿಸಿದರು.
ಹಣದುಬ್ಬರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಳೆದ ಒಂದು ವರ್ಷದಲ್ಲಿ ಆರ್ ಬಿ ಐ 250 ಬೇಸಿಸ್ ಪಾಯಿಂಟ್ಸ್ ನಷ್ಟು ರೆಪೋ ದರ ಏರಿಕೆ ಮಾಡಿತ್ತು. ಇನ್ನಷ್ಟು ಏರಿಕೆ ಮಾಡಿದರೆ ಆರ್ಥಿಕ ಬೆಳವಣಿಗೆಗೆ ತೊಡಕಾಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಲು ತೀರ್ಮಾನಿಸಲಾಗಿದೆ.