ನವದೆಹಲಿ: ಇನ್ನು ಮುಂದೆ ಆರೋಗ್ಯ ಸಚಿವಾಲಯದ ಕ್ಯಾಂಟೀನ್‌ಗಳಲ್ಲಿ ಕರಿದ ಆಹಾರವನ್ನು ನೀಡಲಾಗುವುದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಬುಧವಾರ ಘೋಷಿಸಿದ್ದಾರೆ.
ಕರಿದ ಸಮೋಸಾಗಳಂತಹ ತಿಂಡಿ ಬದಲಾಗಿ ಆರೋಗ್ಯಕರ ಆಹಾರಗಳಾದ ಬಾಳೆಹಣ್ಣಿನ ಸ್ಟಫಿಂಗ್, ರಾಗಿ ಶೀರಾ, ಆಯುರ್ವೇದ ಖಿಚಡಿ ಇತ್ಯಾದಿಗಳನ್ನು ಒದಗಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ಧರ್ಮಗ್ರಂಥಗಳು ಮತ್ತು ವಿಜ್ಞಾನಿಗಳು ನಮ್ಮ ಆಹಾರವೇ ನಮಗೆ ಔಷಧಿ ಎಂದು ನಂಬುತ್ತಾರೆ. ಹಾಗೂ ಜೀವನದಲ್ಲಿ ಉತ್ತಮ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ ಎಂದು ಮಾಂಡವಿಯಾ ತಿಳಿಸಿದ್ದಾರೆ.
ಸುಲಭವಾಗಿ ಮಾಡಬಹುದಾದ ಮತ್ತು ಆರೋಗ್ಯಕರವಾದ ಸರಳವಾದ ಭಕ್ಷ್ಯಗಳನ್ನು ಒದಗಿಸುವುದು ಆರೋಗ್ಯ ಸಚಿವಾಲಯದ ಆಲೋಚನೆಯಾಗಿದೆ. ಉದಾಹರಣೆಗೆ ಕರಿದ ಆಹಾರ ಸೇವನೆ ಆರೋಗ್ಯಕ್ಕೆ ಉತ್ತಮವಲ್ಲದ ಕಾರಣ ಈ ನಿರ್ಧಾರ ಮಾಡಲಾಗಿದೆ. ಆಲೂಗಡ್ಡೆಯ ಬದಲು ಬಾಳೆಹಣ್ಣುಗಳನ್ನು ಸೇರಿಸುವ ಮೂಲಕ ಸಮೋಸಕ್ಕೆ ಟ್ವಿಸ್ಟ್ ನೀಡಲು ಚಿಂತಿಸಲಾಗಿದೆ.
ಜನರು ಬಯಸಿದಲ್ಲಿ ಮೆನುವಿನಲ್ಲಿ ಹೆಚ್ಚಿನ ಭಕ್ಷ್ಯಗಳನ್ನು ಸೇರಿಸಲಾಗುವುದು. ಇಲ್ಲಿಯವರೆಗೆ, ಬದಲಾವಣೆಗಳಿಗೆ ಪ್ರತಿಕ್ರಿಯೆಯು ಉತ್ತಮವಾಗಿದೆ. ಏಕೆಂದರೆ, ಜನರು ಆರೋಗ್ಯಕರ ಆಹಾರದಿಂದ ಸಂತೋಷವಾಗಿದ್ದಾರೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.