
ಮಹಾರಾಷ್ಟ್ರದ ಅಂಧೇರಿ ವೆಸ್ಟ್, ಬಿಹಾರದ ಮೂಕಾಮ್ ಹಾಗೂ ಗೋಪಾಲ್ ಗಂಜ್, ಹರಿಯಾಣದ ಆದಂಪುರ, ತೆಲಂಗಾಣದ ಮೂನು ಗೂಡ, ಉತ್ತರ ಪ್ರದೇಶದ ಗೋಲ ಗೋರಕ್ನಾಥ್ ಮತ್ತು ಒಡಿಸ್ಸಾದ ಧಾಮ್ನಗರ್ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.
ಅಕ್ಟೋಬರ್ 7ರಂದು ಗೆಜೆಟ್ ನೋಟಿಫಿಕೇಶನ್ ಹೊರಬೀಳಲಿದ್ದು, ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ 14 ಅಂತಿಮ ದಿನಾಂಕವಾಗಿದೆ. ಅಕ್ಟೋಬರ್ 15ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಅಕ್ಟೋಬರ್ 17 ಕೊನೆಯ ದಿನಾಂಕವಾಗಿದೆ.
ನವೆಂಬರ್ 3ರ ಗುರುವಾರದಂದು ಉಪಚುನಾವಣೆಗೆ ಮತದಾನ ನಡೆಯಲಿದ್ದು, ನವೆಂಬರ್ 6ರ ಭಾನುವಾರ ಮತ ಎಣಿಕೆ ಕಾರ್ಯ ನಡೆಯಲಿದೆ. ಬಹುತೇಕ ಅದೇ ದಿನ ಫಲಿತಾಂಶ ಹೊರ ಬೀಳಲಿದೆ.