ಕೋಲಾರ: ಕಂದಾಯ ಸಚಿವ ಆರ್.ಅಶೋಕ್ ಆಪರೇಷನ್ ಕಮಲದ ಸುಳಿವು ನೀಡಿದ ಬೆನ್ನಲ್ಲೇ ತೋಟಗಾರಿಕಾ ಸಚಿವ ಮುನಿರತ್ನ 10 ಕಾಂಗ್ರೆಸ್ ನಾಯಕರ ಟೀಂ ನ್ನು ಕರೆತರುತ್ತಿದ್ದೇವೆ ಎಂದು ಹೇಳಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮುನಿರತ್ನ, ಸಮ್ಮಿಶ್ರ ಸರ್ಕಾರ ಇದ್ದಾಗ ನಾವು 17 ಶಾಸಕರು ಬಿಜೆಪಿಗೆ ಬಂದಿದ್ದೆವು. ಈಗ 10 ಶಾಸಕರು ಸಜ್ಜಾಗಿದ್ದಾರೆ. ಶೀಘ್ರದಲ್ಲಿಯೇ ಅವರನ್ನು ಬಿಜೆಪಿಗೆ ಕರೆತರಲಾಗುವುದು ಎಂದರು.
ಒಟ್ಟು 22 ಶಾಸಕರು ರೆಡಿ ಇದ್ದಾರೆ ಅವರಲ್ಲಿ ನಾವು 10 ಜನರನ್ನು ಆಯ್ಕೆ ಮಾಡಿದ್ದೇವೆ. ಕಾದುನೋಡಿ ಕಾಂಗ್ರೆಸ್ ನ 10 ಶಾಸಕರು ಬಿಜೆಪಿಗೆ ಬರ್ತಾರೆ. ನಮ್ಮ ಹಳೇ ಮಿತ್ರರಾದ ಹತ್ತು ಜನರನ್ನು ಕರೆ ತರುತ್ತಿದ್ದೇವೆ. ಈ ಬಾರಿ ಬಿಜೆಪಿಯವರೇ ರಾಜ್ಯದ ಸಿಎಂ ಆಗಲಿದ್ದಾರೆ ಎಂದು ಹೇಳುವ ಮೂಲಕ ಆಪರೇಷನ್ ಕಮಲದ ಬಾಂಬ್ ಸಿಡಿಸಿದ್ದಾರೆ.