ಬೆಂಗಳೂರು: ಯಾವತ್ತಿದ್ದರೂ ಸತ್ಯ ಗೊತ್ತಾಗಲೇಬೇಕು. ಪ್ರಸ್ತುತ ದೇಶ ಹೋಗುತ್ತಿರುವ ಹಾದಿ ನೋಡಿ ಜನರ ಮುಂದೆ ಸತ್ಯಾಂಶ ಹೇಳಬೇಕೆಂದು ನಿರ್ಧರಿಸಿ ಆರ್.ಎಸ್.ಎಸ್ ನ ಆರ್ಭಟದ ಬಗ್ಗೆ ಹೇಳಿದ್ದೇನೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.
ಆರ್.ಎಸ್.ಎಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗುತ್ತಿದ್ದು, ಇದರ ಬೆನ್ನಲ್ಲೇ ಮತ್ತೆ ವಾಗ್ದಾಳಿ ಮುಂದುವರೆಸಿರುವ ಹೆಚ್.ಡಿ.ಕೆ, ಸಂಘದೊಳಗಿನ ವಾಸ್ತವಾಂಶಗಳನ್ನು ಪ್ರತ್ಯಕ್ಷವಾಗಿ ನೋಡಿದವರೇ ಬರೆದ ಪುಸ್ತಕ ಓದಿ ನನಗೆ ಅಲ್ಲಿನ ವ್ಯವಹಾರಗಳ ವಿರಾಟ್ ದರ್ಶನವಾಯಿತು. ಇನ್ನು ಶಾಖೆಯನ್ನೇ ಸೇರಿಕೊಂಡರೆ ಇನ್ನೆಷ್ಟು ಸತ್ಯ ಸಂಗತಿಗಳು ಗೊತ್ತಾಗಬಹುದು..? ಎಂದು ಊಹಿಸಿ ಎಂದು ಹೇಳಿದ್ದಾರೆ.
‘ಕೊರೊನಾ’ ಪೀಡಿತ ಗರ್ಭಿಣಿ ಜೀವನದಲ್ಲಿ ನಡೆದಿದೆ ಪವಾಡ..!
ಜೆಡಿಎಸ್ ವಿರುದ್ಧ ಕಿಡಿಕಾರಿರುವ ಸಿ.ಟಿ.ರವಿ ವಿರುದ್ಧವೂ ಗುಡುಗಿರುವ ಕುಮಾರಸ್ವಾಮಿ, ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತದ ಬಗ್ಗೆ ಮಾತನಾಡಿದ್ದೀರಿ. ನಿಮ್ಮ ಪಕ್ಷ ಮತ್ತು ನಿಮ್ಮ ಸರ್ಕಾರದಲ್ಲಿ ತಾಂಡವವಾಡುತ್ತಿರುವ ಅಪರಿಮಿತ ಭ್ರಷ್ಟಾಚಾರ, ಕುಟುಂಬ ರಾಜಕಾರಣಗಳ ಬಗ್ಗೆಯೂ ನೀವು ಹೇಳಬೇಕು. ಅದಕ್ಕೂ ಆರ್.ಎಸ್.ಎಸ್ ಶಾಲೆಯಲ್ಲಿ ತರಬೇತಿ ನೀಡಲಾಯಿತೇ? ಎಂದು ಪ್ರಶ್ನಿಸಿದ್ದಾರೆ.
ಪ್ರಜಾಪ್ರಭುತ್ವವನ್ನೇ ಬುಡಮೇಲು ಮಾಡುವಂಥ ಆಪರೇಷನ್ ಕಮಲದಂಥ ಅನೈತಿಕ, ನಿರ್ಲಜ್ಜ, ನೀಚ ರಾಜಕಾರಣವನ್ನು ಆರ್.ಎಸ್.ಎಸ್ ಶಾಖೆಯಲ್ಲೇ ಕಲಿಸಲಾಯಿತಾ ಎಂಬುದನ್ನೂ ಸಿ.ಟಿ.ರವಿಯವರು ಜನರ ಮುಂದೆ ಹೇಳಬೇಕು ಎಂದು ಆಗ್ರಹಿಸಿದ್ದಾರೆ.
ಆನ್ಲೈನ್ ನಲ್ಲಿ ಸ್ಥಿರ ಠೇವಣಿ ಖಾತೆ ತೆರೆದ್ರೆ ಸಿಗಲಿದೆ ಹೆಚ್ಚಿನ ಬಡ್ಡಿ
ಸಮಾಜದ ಶಾಂತಿ ಕಾಪಾಡಬೇಕೆ ಹೊರತು ಅದಕ್ಕೆ ಕೊಳ್ಳಿ ಇಡಬಾರದು. ಆರ್.ಎಸ್.ಎಸ್ ಹುಟ್ಟಿದಾಗಿನಿಂದಲೂ ಏನೆಲ್ಲ ಮಾಡಿಕೊಂಡು ಬಂದಿದೆ ಎನ್ನುವುದು ಜಗತ್ತಿಗೇ ಗೊತ್ತಿರುವ ಸಂಗತಿ. ಛಿದ್ರವಾಗಿರುವ ಜನರ ಬದುಕು, ಬವಣೆಗಳನ್ನು ಒಮ್ಮೆ ನೋಡಿ…ಈ ಬಗ್ಗೆ ಆರ್.ಎಸ್.ಎಸ್ ನಲ್ಲಿ ನಿಮಗೆಲ್ಲ ಏನನ್ನೂ ಹೇಳಿಕೊಡಲಿಲ್ಲವೇ? ಸೇವೆ ಸೋಗಿನಲ್ಲಿ ಸಂಸ್ಥೆಗಳು ರಾಜಕೀಯ ಮಾಡುವುದು ಸರಿಯಲ್ಲ ಎಂದು ಸರಣಿ ಟ್ವೀಟ್ ಮೂಲಕ ಕುಮಾರಸ್ವಾಮಿ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.