alex Certify BIG NEWS: ’ಆಪರೇಷನ್ ಕಮಲ’ ಎಂಬ ಸೋಂಕು ಕೊರೊನಾಗಿಂತ ಅಪಾಯಕಾರಿ; ಕರ್ನಾಟಕದಲ್ಲಿ ಆರಂಭವಾದ ಸೋಂಕು ಪ್ರಜಾಪ್ರಭುತ್ವವನ್ನೇ ಕೊಲ್ಲುತ್ತಿದೆ; ಕಿಡಿಕಾರಿದ ಕಾಂಗ್ರೆಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ’ಆಪರೇಷನ್ ಕಮಲ’ ಎಂಬ ಸೋಂಕು ಕೊರೊನಾಗಿಂತ ಅಪಾಯಕಾರಿ; ಕರ್ನಾಟಕದಲ್ಲಿ ಆರಂಭವಾದ ಸೋಂಕು ಪ್ರಜಾಪ್ರಭುತ್ವವನ್ನೇ ಕೊಲ್ಲುತ್ತಿದೆ; ಕಿಡಿಕಾರಿದ ಕಾಂಗ್ರೆಸ್

ಬೆಂಗಳೂರು: ತೆಲಂಗಾಣದಲ್ಲಿ ಬಿಜೆಪಿಯ ಕುದುರೆ ವ್ಯಾಪಾರದ ಬಣ್ಣ ಬಯಲಾಗಿದೆ. ಬಿಜೆಪಿಗೆ ಈಗ ಭ್ರಷ್ಟ ಹಣದ ಮದವೇರಿದೆ, ಪ್ರಜಾಪ್ರಭುತ್ವವನ್ನೇ ಖರೀದಿಸಲು ಹೊರಟಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ತೆಲಂಗಾಣದ ಆಪರೇಷನ್ ಕಮಲದ ವ್ಯವಹಾರದಲ್ಲಿ ಶಾಸಕರ ಮುಖಂಡತ್ವ ವಹಿಸುವವರಿಗೆ ₹100 ಕೋಟಿ. ಬರುವ ಪ್ರತಿ ಶಾಸಕರಿಗೆ ₹50 ಕೋಟಿ. ಈ ಮೊತ್ತದ ಹಣ ಬಂದಿದ್ದು ಹೇಗೆ? ಎಂದು ಪ್ರಶ್ನಿಸಿದೆ.

ಕುರುಡು ಕಾಂಚಾಣ ಕುಣಿಯುತಲಿತ್ತು, ಕಾಲಿಗೆ ಸಿಕ್ಕವರ ತುಳಿಯುತಲಿತ್ತು ಎಂಬ ಬೇಂದ್ರೆಯವರ ಸಾಲಿನಂತೆ ಭ್ರಷ್ಟ ಕಾಂಚಾಣದಿಂದ ಬಿಜೆಪಿಯು ಪ್ರಜಾಪ್ರಭುತ್ವವನ್ನು ಕಾಲಡಿಯಲ್ಲಿ ಹಾಕಿಕೊಂಡು ತುಳಿಯುತ್ತಿದೆ.ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿರುವ ಆಪರೇಷನ್ ಕಮಲ ಎಂಬ ಸೋಂಕು. ಕರೋನಾಗಿಂತಲೂ ಅಪಾಯಕಾರಿ ಎಂದು ಕಿಡಿ ಕಾರಿದೆ.

ಕರ್ನಾಟಕದಲ್ಲಿ ಶುರುವಾದ ಆಪರೇಷನ್ ಕಮಲ ಎಂಬ ಸೋಂಕು ದೇಶದಾದ್ಯಂತ ಹರಡಿ ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿದೆ. ದೇಶಾದ್ಯಂತ ಶಾಸಕರನ್ನು ಖರೀದಿಸಲು ಏಳರಿಂದ ಎಂಟು ಸಾವಿರ ಕೋಟಿ ಖರ್ಚು ಮಾಡಿರುವ ಆರೋಪ ಬಿಜೆಪಿ ಮೇಲಿದೆ. ಕರ್ನಾಟಕ, ಗೋವಾ, ಮಹಾರಾಷ್ಟ್ರದ ನಂತರ ಈಗ ತೆಲಂಗಾಣಕ್ಕೆ ಭ್ರಷ್ಟ ಹಣ ತಲುಪಿದೆ ಎಂದು ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ತೆಲಂಗಾಣದಲ್ಲಿ ಆಪರೇಷನ್ ಕಮಲ ಮಾಡಲು ಬಂದವರಲ್ಲಿ 15 ಕೋಟಿ ಹಣ ದೊರಕಿದೆ, ಅದಲ್ಲದೆ ನೂರಿನ್ನೂರು ಕೋಟಿಗೂ ಅಧಿಕ ಮೊತ್ತದ ವ್ಯವಹಾರ ಅದಾಗಿದೆ. ಐಟಿ, ಇಡಿಗಳು ಇದುವರೆಗೂ ಆ ಪ್ರಕರಣವನ್ನು ಕೈಗೆತ್ತಿಕೊಂಡಿಲ್ಲವೇಕೆ? ಆ ಅಕ್ರಮ ಹಣದ ಮೂಲ ಹುಡುಕುವ ಮನಸಿಲ್ಲವೇ? ಐಟಿ, ಇಡಿಗಳಿಗೆ ಬಿಜೆಪಿಯವರ ಮನೆಗೆ ನುಗ್ಗಲು ಭಯವೇ? ಎಂದು ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...