ಬಾಗಲಕೋಟೆ: ರಾಜ್ಯ ಕಾಂಗ್ರೆಸ್ ನಲ್ಲಿ ಈಗಷ್ಟೇ ತಣ್ಣಗಾಗಿದ್ದ ಸಿಎಂ ಕುರ್ಚಿ ಕಾಳಗ ಮತ್ತೆ ಆರಂಭವಾದಂತಿದೆ. ಮಾಜಿ ಸಚಿವ ಎಸ್.ಆರ್.ಪಾಟೀಲ್ ಸಿಎಂ ಆಗಲು ಯೋಗ್ಯ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ನಡೆದ ಕಾರ್ಯಕ್ರಮದ ವೇಳೆ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಎಂ.ವೀರಪ್ಪ ಮೊಯ್ಲಿ, ಕಾಂಗ್ರೆಸ್ ನಲ್ಲಿ ಆದರ್ಶ ಸಿಎಂ ಆಗಲು ಎಸ್.ಆರ್.ಪಾಟೀಲ್ ಯೋಗ್ಯ ವ್ಯಕ್ತಿ ಎಂದು ಎಸ್.ಆರ್.ಪಾಟೀಲ್ ಪರ ಬ್ಯಾಟ್ ಬೀಸಿದ್ದಾರೆ.
ಅಲ್ಲದೇ ಪಕ್ಷದಲ್ಲಿ ಯೋಗ್ಯ ನಾಯಕನೆಂದರೆ ಅದು ಎಸ್.ಆರ್.ಪಾಟೀಲ್ ಎಂದು ಹೇಳುವ ಮೂಲಕ ಎಸ್.ಆರ್.ಪಾಟೀಲ್ ಅವರನ್ನು ಮೊಯ್ಲಿ ಹಾಡಿ ಹೊಗಳಿದ್ದಾರೆ. ಶಾಸಕ ಜಮೀರ್ ಅಹ್ಮದ್ ಅವರಿಗೆ ಹೈಕಮಾಂಡ್ ವಾರ್ನಿಂಗ್ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ತಣ್ಣಗಾಗಿದ್ದ ಸಿಎಂ ಹುದ್ದೆ ಪೈಪೋಟಿ, ಇದೀಗ ಮತ್ತೆ ಆರಂಭವಾಗುವ ಸಾಧ್ಯತೆ ಇದೆ.