ಬೆಂಗಳೂರು: ರಾಜಕೀಯ ಪ್ರಭಾವಿಗಳಿಂದ ಕಿರುಕುಳ ಎಂದು ಆರೋಪಿಸಿ ಒಂದೇ ಕುಟುಂಬದ 9 ಸದಸ್ಯರು ವಿಜಯನಗರದ ಎಸ್ ಪಿ ಕಚೇರಿ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಸಚಿವ ಆನಂದ್ ಸಿಂಗ್ ಸೇರಿದಂತೆ ನಾಲ್ವರ ವಿರುದ್ಧ ಕಿರಿಕುಳ ಆರೋಪ ಮಾಡಿರುವ ಕುಟುಂಬ ಆತ್ಮಹತ್ಯೆಗೆ ಯತ್ನಿಸಿದೆ. ತಕ್ಷಣ ಪೊಲೀಸರು ತಡೆದಿದ್ದು, ಪ್ರಕರಣ ಸಂಬಂಧ ಇದೀಗ ಸಚಿವ ಆನಂದ್ ಸಿಂಗ್, ಮರಿಯಪ್ಪ, ಹನುಮಂತಪ್ಪ, ಹುಲುಗಪ್ಪ ಎಂಬ ನಾಲ್ವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಕಿರುಕುಳಕ್ಕೊಳಗಾದ ಪೋಲಪ್ಪ ಎಂಬುವವರು ಸಚಿವರು ಸೇರಿ ನಾಲ್ವರ ವಿರುದ್ಧ ದೂರು ನೀಡಿದ್ದು, ಹೊಸಪೇಟೆ ಗ್ರಾಮೀಣ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.