ಬೆಂಗಳೂರು: ನಟ ವಿದ್ಯಾಭರಣ್ ವಿರುದ್ಧ ಆಡಿಯೋ ವೈರಲ್ ವಿವಾದಕ್ಕೆ ಸಂಬಂಧಿಸಿದಂತೆ ವಿದ್ಯಾಭರಣ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಕಮೀಷನರ್ ಪ್ರತಾಪ್ ರೆಡ್ಡಿ ಅವರಿಗೆ ದೂರು ನೀಡಿದ ಬಳಿಕ ಮಾತನಾಡಿದ ವಿದ್ಯಾಭರಣ್, ಅನಗತ್ಯವಾಗಿ ನಮ್ಮ ಕುಟುಂಬದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಯಾರೋ ನಮ್ಮ ಹಿತಶತ್ರುಗಳೇ ಈ ರೀತಿ ಮಾಡಿರಬಹುದು. ಈ ಹಿನ್ನೆಲೆಯಲ್ಲಿ ದೂರು ನೀಡಿದ್ದಾಗಿ ತಿಳಿಸಿದ್ದಾರೆ.
ಆಡಿಯೋದಲ್ಲಿ ನನ್ನ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು. ನಾನು ಯಾವ ಯುವತಿಯ ಜೊತೆಯೂ ತಪ್ಪಾಗಿ ನಡೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ. ಇನ್ನು ನಟಿ ವೈಷ್ಣವಿ ಗೌಡ ಜೊತೆ ನಿಶ್ಚಿತಾರ್ಥವಾಗಿರಲಿಲ್ಲ. ಮದುವೆ ಮಾತುಕತೆ ಮಾತ್ರ ನಡೆದಿತ್ತು ಎಂದು ವಿದ್ಯಾಭರಣ್ ತಿಳಿಸಿದ್ದಾರೆ.