ಬೆಂಗಳೂರು: ಹಣಕ್ಕಾಗಿ ಬೇಡಿಕೆಯಿಟ್ಟ ಆಡೀಯೋ ಹಾಗೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆಯಲಾಗಿದ್ದ ಸಚಿವ ಶ್ರೀರಾಮುಲು ಆಪ್ತ ರಾಜಣ್ಣನನ್ನು ಸಿಸಿಬಿ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಕೋಟ್ಯಂತರ ರೂಪಾಯಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ 3 ಆಡಿಯೋ ವಿಚಾರವಾಗಿ ತೀವ್ರ ವಿಚಾರಣೆ ನಡೆಸಿರುವ ಸಿಸಿಬಿ ಪೊಲೀಸರು ರಾಜಣ್ಣ ಮೊಬೈಲ್ ವಶಕ್ಕೆ ಪಡೆದಿದ್ದು, ಅಗತ್ಯವಿದ್ದರೆ ಹೆಚ್ಚಿನ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿ, ರಾಜಣ್ಣನನ್ನು ಬಿಟ್ಟು ಕಳುಹಿಸಿದ್ದು, ಅಧಿಕಾರಿಗಳ ನಡೆ ಅನುಮಾನಕ್ಕೆ ಕಾರಣವಾಗಿದೆ.
BIG NEWS: ಭಯಂಕರ ಸ್ಫೋಟದ ಸದ್ದು; ಬೆಚ್ಚಿಬಿದ್ದ ಬೆಂಗಳೂರಿಗರು…!
ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ರಾಜಣ್ಣ ಡೀಲ್ ಮಾಡಿದ್ದಾರೆ ಎನ್ನಲಾದ 3 ಆಡಿಯೋಗಳು ಸಿಸಿಬಿಗೆ ಲಭ್ಯವಾಗಿದ್ದು, ಮೊದಲ ಆಡಿಯೋದಲ್ಲಿ 75 ಲಕ್ಷ ರೂ. ಬೇಡಿಕೆ ಇಟ್ಟಿದ್ದರೆ, ಎರಡನೇ ಆಡಿಯೋದಲ್ಲಿ 1 ಕೋಟಿ ಹಾಗೂ ಮೂರನೇ ಆಡಿಯೋದಲ್ಲಿ 3ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿರುವ ಬಗ್ಗೆ ಆಡಿಯೋ ಲಭ್ಯವಾಗಿದೆ ಎನ್ನಲಾಗಿದೆ. ಆದರೆ ಆಡಿಯೋದಲ್ಲಿರುವ ಧ್ವನಿ ತನ್ನದಲ್ಲ ಎಂದು ರಾಜಣ್ಣ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.