ಬೆಂಗಳೂರು: ಪತ್ರಕರ್ತರಿಗೆ ಸಿಎಂ ಕಚೇರಿಯಿಂದ ಲಂಚ ಪ್ರಕರಣ ವಿಚಾರವಾಗಿ ಕಿಡಿಕಾರಿರುವ ಕಾಂಗ್ರೆಸ್ ಹಿರಿಯ ನಾಯಕ ಎಂ.ಬಿ.ಪಾಟೀಲ್, ದೀಪಾವಳಿಗೆ ಸ್ವೀಟ್ ಬಾಕ್ಸ್ ಕೊಡಬೇಕು. ಅದನ್ನು ಬಿಟ್ಟು ಸ್ವೀಟ್ ಬಾಕ್ಸ್ ನಲ್ಲಿ ದುಡ್ದು ಇಟ್ಟು ಕೊಡುವುದು ಅಂದರೇನು? ಇದೊಂದು ಕೆಟ್ಟ ಸಂಪ್ರದಾಯ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಮಾಧ್ಯಮ ಸಲಹೆಗಾರ ಪತ್ರಕರ್ತರಿಗೆ ಸಿಎಂ ಕಚೇರಿಯಿಂದ ಲಂಚ ನೀಡಿದ್ದಾರೆ ಎಂದರೆ ಅಷ್ಟೊಂದು ಹಣ ಅವರಿಗೆ ಎಲ್ಲಿಂದ ಬಂತು? ಯಾರ ದುಡ್ಡು ಅದು? ಇದು ಪೇ ಸಿಎಂ ರೀತಿ ಪೇ ಪಿಎಂ ಆಗಿದೆ. ಪೇ ಪಿಎಂ ಅಂದರೆ ಪೇ ಫಾರ್ ಪ್ರೆಸ್ ಆಂಡ್ ಮೀಡಿಯಾ ಆಗಿದೆ ಎಂದು ಗುಡುಗಿದರು.
ಯಾರ್ಯಾರಿಗೆ ದುಡ್ದು ಹೋಗಿದೆ? ಯಾರ್ಯಾರು ವಾಪಸ್ ಕೊಟ್ಟಿದ್ದಾರೆ? ಸಿಎಂ ಮಾಧ್ಯಮ ಸಲಹೆಗಾರ ದುಡ್ಡು ತಂದು ಕೊಡ್ತಾರೆ ಅಂದ್ರೇನು? ಅದೇನು ಸಿಎಂ ಮಾಧ್ಯಮ ಸಲಹೆಗಾರನ ದುಡ್ಡಾ? ಎಲ್ಲಿಂದ ಬಂತು ಆ ಹಣ? ಸಿಎಂ ಬೊಮ್ಮಾಯಿ ಗಮನಕ್ಕೆ ಬಂದಿರದೇ ಈ ದುಡ್ಡು ಬರಲು ಹೇಗೆ ಸಾಧ್ಯ? ಈ ಬಗ್ಗೆ ಮುಖ್ಯಮಂತ್ರಿಗಳು ಉತ್ತರ ಕೊಡಬೇಕು. ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸಿಎಂ ರಾಜೀನಾಮೆ ಕೊಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ