ಬೆಂಗಳೂರು: ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ, ಬಿಜೆಪಿ ಮುಖಂಡ ಸಂಜಯ್ ಪಾಟೀಲ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ.
ರಾತ್ರಿ ರಾಜಕೀಯ ಗೊತ್ತಿದ್ದಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಸಕಿಯಾಗಿದ್ದಾರೆ ಎಂದು ಸಂಜಯ್ ಪಾಟೀಲ್ ನಾಲಿಗೆ ಹರಿಬಿಟ್ಟಿದ್ದರು. ಬಿಜೆಪಿ ಮುಖಂಡನ ಈ ಹೇಳಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದರು. ಸಂಜಯ್ ಪಾಟೀಲ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಆದರೆ ತನ್ನ ಹೇಳಿಕೆಗೆ ಸಮಜಾಯಿಷಿ ಕೊಟ್ಟಿದ್ದ ಸಂಜಯ್ ಪಾಟೀಲ್, ನಾನು ಆ ರೀತಿ ಹೇಳಿಲ್ಲ, ನನ್ನ ಹೇಳಿಕೆಯನ್ನು ಅಪಾರ್ಥ ಬರುವ ರೀತಿ ತಿರುಚಲಾಗಿದೆ ಎಂದು ಹೇಳಿದ್ದರು.
24 ಗಂಟೆಗಳಲ್ಲಿ Shiba Inu ಬೆಲೆಯಲ್ಲಿ ಬರೋಬ್ಬರಿ 45 ಪ್ರತಿಶತ ಏರಿಕೆ..! ಇದಕ್ಕೆ ಕಾರಣವಾಗಿದ್ದು ಆ ಒಂದು ಟ್ವೀಟ್
ಇದೀಗ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ವೀಣಾ ಕಾಶಪ್ಪನವರ್, ಸಂಜಯ್ ಪಾಟೀಲ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಬಗ್ಗೆ ಪರಿಶೀಲಿಸಿ, ನಮ್ಮ ವ್ಯಾಪ್ತಿಯಲ್ಲಿ ಸಂಜಯ್ ಪಾಟೀಲ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮಹಿಳಾ ಆಯೋಗದ ಅದ್ಯಕ್ಷೆ ಪ್ರಮಿಳಾ ನಾಯ್ಡು ತಿಳಿಸಿದ್ದಾರೆ.