ಬೆಂಗಳೂರು: ವಿಧಾನಸಭೆ ಚುನಾವಣಾ ಅಖಾಡ ರಂಗೇರಿದ್ದು, ಆಡಳಿತ-ವಿಪಕ್ಷ ನಾಯಕರ ವಾಕ್ಸಮರ ತಾರಕಕ್ಕೇರಿದೆ. ವೇಶ್ಯೆಯರ ರೀತಿ ತಮ್ಮ ಶಾಸಕ ಸ್ಥಾನವನ್ನು ಮಾರಿಕೊಂಡಿದ್ದಾರೆ ಎಂದು ವಲಸಿಗ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಸಚಿವ ಬಿ.ಸಿ.ಪಾಟೀಲ್ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ಸಿಗರು ದ್ರೋಹ ಮಾಡಿದ್ದಕ್ಕೆ ರಾಜೀನಾಮೆ ಕೊಟ್ಟು ಬಂದೆವು. ನಾವು ಜನಾದೇಶ ಪಡೆದೇ ಶಾಕರಾಗಿದ್ದೇವೆ. ಬಿ.ಕೆ.ಹರಿಪ್ರಸಾದ್ ಯಾವ ಚುನಾವಣೆಯನ್ನು ಗೆದ್ದು ಬಂದಿದ್ದಾರೆ? ಹಿಂಬಾಗಿಲಿನಿಂದ ಬಂದು ಎಂಎಲ್ ಸಿ ಆದವರು. ಇವರನ್ನು ಏನನ್ನಬೇಕು? ಎಂದು ಕಿಡಿಕಾರಿದ್ದಾರೆ.
ಆದರೆ ನಾವು ಅವರಂತೆ ಮಾತನಾಡಲ್ಲ. ಆ ರೀತಿ ಹೋಲಿಕೆ ಮಾಡಿದ್ದು ಅವರ ಸಂಸ್ಕೃತಿಯನ್ನು ತೋರುತ್ತದೆ. ಕಾಂಗ್ರೆಸ್ ನವರು ಇಷ್ಟುವರ್ಷ ರೋಗಗ್ರಸ್ಥ ಸರ್ಕಾರ ಮಾಡಿದ್ದರು. ಬಿಜೆಪಿ ಸರ್ಕಾರ ಅದನ್ನು ತೊಳೆಯುವ ಕೆಲಸ ಮಾಡಿದೆ ಎಂದು ಹೇಳಿದ್ದಾರೆ.