ಬಾಗಲಕೋಟೆ: ದಂಪತಿಗಳ ಮೇಲೆ ಶಾಸಕ ವೀರಣ್ಣ ಚರಂತಿಮಠ ಹಲ್ಲೆ ನಡೆಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಶಾಸಕರು, ಆ ದಂಪತಿಗಳು ಯಾರೆಂದೇ ನನಗೆ ಗೊತ್ತಿಲ್ಲ, ನಾನು ಅವರನ್ನು ನೋಡಿಯೂ ಇಲ್ಲ ಎಂದು ಹೇಳಿದ್ದಾರೆ.
ನನ್ನ ವಿರುದ್ಧ ಆರೋಪ ಮಾಡಿರುವ ದಂಪತಿಗಳು ಯಾರೆಂದು ನನಗೆ ಗೊತ್ತಿಲ್ಲ. ಅವರು ವಂಚಕರು, ಅವಲಕ್ಕಿ ಫ್ಯಾಕ್ಟರಿ ಮಾಡುತ್ತೇನೆ ಎಂದು ಕೆವಿಜಿ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದಾರೆ. ನಮ್ಮ ಬೀಳೂರು ಬ್ಯಾಂಕ್ ನಲ್ಲಿಯೂ ಸಾಲ ಮಾಡಿದ್ದಾರೆ. 8 ವರ್ಷಗಳ ಹಿಂದೆ 80 ಲಕ್ಷ ಸಾಲ ಪಡೆದಿದ್ದು, ಈಗ 60 ಲಕ್ಷ ರೂಪಾಯಿ ಬಡ್ಡಿ ಸೇರಿ ಒಟ್ಟು 1 ಕೋಟಿ 40 ಲಕ್ಷ ರೂಪಾಯಿಗೆ ತಲುಪಿದೆ ಎಂದು ಹೇಳಿದ್ದಾರೆ.
ನಮ್ಮ ಬ್ಯಾಂಕ್ ನ ಇಬ್ಬರು ಡೈರೆಕ್ಟರ್ ಜಾಮೀನು ಹಾಕಿದ್ದಾರೆ. ಸಾಲ ಮರು ವಸೂಲಿ ಮಾಡಲು ಆ ಇಬ್ಬರ ಆಸ್ತಿ ಮೇಲೆ ಬೋಜಾ ಕೊಡಿಸಿದ್ದೇವೆ. ಹೀಗಾಗಿ ದಂಪತಿಗೂ ನಮಗೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.